This is the title of the web page
This is the title of the web page

Please assign a menu to the primary menu location under menu

State

ಕುಕನೂರು: ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ


ಕೊಪ್ಪಳ ಜುಲೈ ೧೭ : ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ೨೦೨೩-೨೪ನೇ ಸಾಲಿನ ಪ್ರವೇಶಕ್ಕಾಗಿ ಆಫ್‌ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯಲ್ಲಿ ಪ್ರಸಕ್ತ ಸಾಲಿಗೆ ಮೆರಿಟ್ ಕಂ ರಿಸರ್ವೇಷನ್ ಆಧಾರಿತ ನಡೆದಂತಹ ಆನ್‌ಲೈನ್ ಪ್ರವೇಶ ಪ್ರಕ್ರಿಯೆಯು ಮುಗಿದ ನಂತರ ವಿವಿಧ ವೃತ್ತಿಗಳಲ್ಲಿ ಉಳಿದ ಖಾಲಿ ಸ್ಥಾನಗಳಿಗೆ ಜುಲೈ ೧೭ರಿಂದ ಆಗಸ್ಟ್ ೦೩ರವರೆಗೆ ವೃತ್ತಿಗಳ ಅನುಸಾರವಾಗಿ ೮ನೇ ತರಗತಿ ಅಥವಾ ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ೧೪ ವರ್ಷ ಮೇಲ್ಪಟ್ಟ ವಯೋಮಿತಿಯ ಅರ್ಹ ಆಸಕ್ತ ಅಭ್ಯರ್ಥಿಗಳು ವಿವಿಧ ತಾಂತ್ರಿಕ, ತಾಂತ್ರಿಕೇತರ ವೃತ್ತಿಗಳಿಗೆ ಆಫ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
ಆಯಾ ದಿನದಂದು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಮಾರನೇ ದಿನದಂದು ಉಳಿದ ಖಾಲಿ ಸ್ಥಾನಗಳಿಗೆ ಪ್ರವೇಶ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೪೮೧೭೧೮೮೫೯, ೯೧೬೪೧೯೮೨೪೬, ೯೯೪೫೭೮೯೪೦೦, ೯೯೬೪೨೪೭೦೯೮ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Leave a Reply