This is the title of the web page
This is the title of the web page

Please assign a menu to the primary menu location under menu

State

ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸಾಲ-ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ


ಕೊಪ್ಪಳ, ಅ. ೦೭ : ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ೨೦೨೧-೨೨ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆಯ ಉದ್ಯೋಗಿನಿ ಯೋಜನೆಯಡಿ ಪರಿಶಿಷ್ಟ ಪಂಗಡದ ಮಹಿಳೆಯರಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಫಲಾನುಭವಿಗಳು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಾಗಿಬೇಕು. ೧೮ ರಿಂದ ೫೫ ವರ್ಷ ವಯಸ್ಸಿನವರಾಗಿರಬೇಕು. ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು, ಮಹಿಳಾ ಫಲಾನುಭವಿಗಳ ವಾರ್ಷಿಕ ವರಮಾನ ರೂ. ೨ ಲಕ್ಷ ಮಿರಿರಬಾರದು. ಅರ್ಜಿಯನ್ನು ಉಚಿತವಾಗಿ ಸಂಬಂಧಪಟ್ಟ ಆಯಾ ವಿಧಾನ ಸಭಾ ಕ್ಷೇತ್ರದ ಅಥವಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಗಳಲ್ಲಿ ಕೆಲಸದ ದಿನಗಳಲ್ಲಿ (ರಜಾದಿನ ಹೊರತುಪಡಿಸಿ) ಬೆಳಗ್ಗೆ ೧೦ ರಿಂದ ಸಾಯಂಕಾಲ ೦೫-೩೦ ಗಂಟೆಯ ಒಳಗೆ ಉಚಿತವಾಗಿ ಪಡೆದು, ಅದರೊಂದಿಗೆ ಫಲನುಭವಿಗಳು ಕೈಗೊಳ್ಳುವ ಆರ್ಥಿಕ ಚಟುವಟಿಕೆಗಳ ಯೋಜನಾ ವರದಿಯ ಜತೆಗೆ ಇತ್ತೀಚಿನ ೩ ಭಾವಚಿತ್ರಗಳು, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ಆಧಾರ್ ಮತ್ತು ಚುಣಾವಣಾ ಗುರುತಿನ ಚೀಟಿಯ ಪ್ರತಿ, ಪಡಿತರ ಚೀಟಿ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್‌ನ ಪಾಸ್ ಬುಕ್ ಪ್ರತಿ ಸೇರಿದಂತೆ ಎಲ್ಲಾ ದಾಖಲಾತಿಗಳನ್ನು ಗೆಜೆಟೆಡ್ ಅಧಿಕಾರಿಗಳೊಂದಿಗೆ ಧೃಢೀಕರಿಸಿ ಅರ್ಜಿಯೊಂದಿಗೆ ಸಲ್ಲಿಸಬೇಕು.
ಭರ್ತಿ ಮಾಡಿದ ಅರ್ಜಿಗಳನ್ನು ಅ. ೩೧ ರೊಳಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಛೇರಿಗೆ ಸಲ್ಲಿಸಬೇಕು. ನಿಗದಿ ಪಡಿಸಿದ ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply