ಕೊಪ್ಪಳ ಮೇ ೧೮ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ೨೦೨೨-೨೩ನೇ ಸಾಲಿನ ಕುರಿಗಾಹಿಗಳಿಗೆ ಸಂಚಾರಿ ಟೆಂಟ್ ಹಾಗೂ ಇನ್ನಿತರೆ ಪರಿಕರ ಕಿಟ್ ವಿತರಣೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ೦೨ ಪರಿಶಿಷ್ಟ ಜಾತಿ, ೦೧ ಪರಿಶಿಷ್ಟ ಪಂಗಡ ಹಾಗೂ ೦೭ ಇತರೆ ಸೇರಿ ಕೊಪ್ಪಳ ಜಿಲ್ಲೆಯಗೆ ಒಟ್ಟು ೧೦ ಗುರಿ ನಿಗದಿಪಡಿಸಲಾಗಿದ್ದು, ಜಿಲ್ಲೆಯಲ್ಲಿ ನೋಂದಣೆಯಾದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ನಿಗದಿತ ಅರ್ಜಿಗಳನ್ನು ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕೊಪ್ಪಳರವರ ಕಚೇರಿಯಿಂದ ಪಡೆದುಕೊಂಡು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳೊಂದಿಗೆ ಜೂನ್ ೦೩ರ ಸಂಜೆ ೫ ಗಂಟೆಯೊಳಗಾಗಿ ನಿಗಮದ ಕಚೇರಿಗೆ ಸಲ್ಲಿಸಬೇಕು.
ಈ ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅನುಷ್ಠಾನಾಧಿಕಾರಿಗಳು ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ ನಿಗಮದ ಕೊಪ್ಪಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.
Gadi Kannadiga > State > ಕುರಿಗಾಹಿಗಳಿಗೆ ಸಂಚಾರಿ, ಪರಿಕರ ಕಿಟ್: ಅರ್ಜಿ ಆಹ್ವಾನ
ಕುರಿಗಾಹಿಗಳಿಗೆ ಸಂಚಾರಿ, ಪರಿಕರ ಕಿಟ್: ಅರ್ಜಿ ಆಹ್ವಾನ
Suresh18/05/2023
posted on
More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023