ಬೆಳಗಾವಿ, ಜು.೦೪: ೨೦೨೨-೨೩ ನೇ ಸಾಲಿನ ಇಲಾಖೆಯ ಎಸ್.ಎಸ್.ಎಲ್.ಸಿ.ನಂತರದ ವಿದ್ಯಾಭ್ಯಾಸ ಮಾಡುತ್ತಿರುವ ಅಂಧ ವಿದ್ಯಾರ್ಥಿಗಳಿಗೆ ಬ್ರೆöÊಲ್‌ಕಿಟ್ ಒದಗಿಸುವ ಯೋಜನೆಯಡಿ ಬ್ರೆöÊಲ್ ಕಿಟ್‌ಗಳನ್ನು ಒದಗಿಸಲು ಬೆಳಗಾವಿ ಜಿಲ್ಲೆಯ ಅಂಧ ವಿದ್ಯಾರ್ಥಿಗಳಿಂದ ಮರು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ದಾಖಲಾತಿಗಳು:
ವಿಕಲಚೇತನರಯು.ಡಿ.ಐ.ಡಿ. ಕಾರ್ಡ (ಕನಿಷ್ಠ ಶೇ.೪೦ ರಷ್ಟು ಅಂಗವಿಕಲತೆ), ತಹಸೀಲ್ದಾರ್ ರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ, ವ್ಯಾಸಂಗ ಮಾಡುತ್ತಿರುವ ಬಗ್ಗೆ ಶಾಲೆ/ ಕಾಲೇಜಿನ/ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಈ ಮೊದಲು ಸದರಿ ಸೌಲಭ್ಯ ಪಡೆದಿರುವುದಿಲ್ಲ ವೆಂದು ರೂ.೧೦೦ ಗಳ ಬಾಂಡ್ ಸಲ್ಲಿಸಬೇಕು
ಅರ್ಜಿಯನ್ನು ಆಯಾ ತಾಲೂಕಿನ ತಾಲೂಕು ಪಂಚಾಯತ ಕಛೇರಿಯಲ್ಲಿನ ವಿವಿದೋದ್ಧೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಿ ದ್ವಿ ಪ್ರತಿಯಲ್ಲಿ ಮ್ಯಾನುವಲ್ ಅರ್ಜಿ ಪಡೆದು ಜು. ೨೫ ೨೦೨೩ರ ವರೆಗೆ ಸಲ್ಲಿಸಬಹುದಾಗಿದೆ, ತಡವಾಗಿ ಬಂದಂತಹ ಅರ್ಜಿಗಳನ್ನು ಹಾಗೂ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಅರ್ಜಿ ನಮೂನೆ ಮತ್ತು ದಾಖಲಾತಿಗಳ ವಿವರಗಳಿಗಾಗಿ ಈ ಕಛೇರಿ ದೂರವಾಣಿ ಸಂಖ್ಯೆ:೦೮೩೧-೨೪೭೬೦೯೬ /೭ಗೆ ಅಥವಾ ತಮ್ಮ ತಾಲೂಕಿನ ಎಂ.ಆರ್.ಡಬ್ಲೂö್ಯ. ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಅಂಧ ವಿದ್ಯಾರ್ಥಿಗಳಿಗೆ ಬ್ರೆöÊಲ್‌ಕಿಟ್ ಒದಗಿಸಲು ಅರ್ಜಿ ಆಹ್ವಾನ
ಅಂಧ ವಿದ್ಯಾರ್ಥಿಗಳಿಗೆ ಬ್ರೆöÊಲ್‌ಕಿಟ್ ಒದಗಿಸಲು ಅರ್ಜಿ ಆಹ್ವಾನ
Suresh04/07/2023
posted on