ಕೊಪ್ಪಳ, ಅ.೧೧ : ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯತ್ ವತಿಯಿಂದ ನಿವೇಶನ ರಹಿತ ಬಡ ಕುಟುಕಬದ ದವರಿಗೆ ನಿವೇಶನ ಒದಗಿಸಲು ಜಮೀನು ಖರೀದಿಗಾಗಿ ಭೂ ಮಾಲೀಕರಿಂದ ಅರ್ಜಿ ಅಹ್ವಾನಿಸಿಲಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಸಹ ಸರ್ಕಾರವು ಪ.ಪಂ.ಗೆ ಗುರಿ ನಿಗದಿಪಡಿಸಿ, ಪ್ರಗತಿ ಸಾಧಿಸಲು ಸೂಚಿಸಲಾಗಿದ್ದು, ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಮೀನು ಮಾಲೀಕರು ತಮ್ಮ ಜಮೀನುಗಳನ್ನು ಸರ್ಕಾರ ನಿಗಧಿಪಡಿಸಿದ ಸೂಕ್ತ ಧರದಲ್ಲಿ ೧೪ ರಿಂದ ೧೫ ಎಕರೆ ಜಮೀನು ಒದಗಿಸಲು ಭೂ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿಯನ್ನು ನವಂಬರ್ ೧೦ ರೊಳಗಾಗಿ ಸಲ್ಲಿಸಬಹುದು ಎಂದು ಭಾಗ್ಯನಗರ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಭಾಗ್ಯನಗರ : ನಿವೇಶನ ಹಂಚಲು ಜಮೀನು ಖರೀದಿಗೆ ಅರ್ಜಿ ಆಹ್ವಾನ