ಕೊಪ್ಪಳ ಜನವರಿ ೨೦ : ಕೆನರಾ ಬ್ಯಾಂಕ ದೇಶಪಾಂಡೆ ಆರ್ಸೆಟಿ(ಆರ್) ಹಳಿಯಾಳ ಇವರ ವತಿಯಿಂದ ಉಚಿತ ರೆಪ್ರೀಜಿರೇಶನ್ & ಎರ್ ಕಂಡಿಶನ್ ರಿಪೇರ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜೆಸಿಬಿ ಇಂಡಿಯಾ ಇವರ ಸಹಯೋಗದಲ್ಲಿ ೩೦ ದಿನಗಳ ಉಚಿತ ರೆಪ್ರೀಜಿರೇಶನ್ & ಎರ್ ಕಂಡಿಶನ್ ರಿಪೇರ್ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ೧೮ ರಿಂದ ೪೫ ವಯಸ್ಸಿನ ನಿರುದ್ಯೋಗಿ ಯುವಕರು ತಮ್ಮ ಜನ್ಮ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಈ ಮಾಡುತ್ತಿರುವ ಕೆಲಸ ಹಾಗೂ ಇತ್ಯಾದಿ ವಿವರಗಳನ್ನು ಒಳಗೊಂಡ ಅರ್ಜಿಯನ್ನು ಜನವರಿ ೩೧ ರೊಳಗೆ ತಲುಪುವಂತೆ ಕೆನರಾ ಬ್ಯಾಂಕ್ ದೇಶಪಾಂಡೆ ರ‍್ಸೆಟಿ(ಆರ್), ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-೫೮೧೩೨೫, ದೂ.ಸಂ: ೦೮೨೮೪-೨೯೮೫೪೭, ಈ ವಿಳಾಸಕ್ಕೆ ಕಳುಹಿಸಿಕೊಡಬೇಕು ಅಥವಾ ವಾಟ್ಸಪ್ ಸಂಖ್ಯೆ ೯೪೪೯೭೮೨೪೨೫, ೯೭೩೧೮೪೨೮೪೯, ೯೭೩೧೮೪೨೮೪೯ ಗೆ ಕಳುಹಿಸಬಹುದು. ತರಬೇತಿಯು ಊಟ ವಸತಿಯೊಂದಿಗೆ ಉಚಿತವಾಗಿದ್ದು, ತರಬೇತಿಯ ನಂತರ ಉದ್ಯೋಗ ನಿಯೋಜನೆ ಮಾರ್ಗದರ್ಶನ ನೀಡಲಾಗುವುದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ರೆಪ್ರೀಜಿರೇಶನ್ & ಎರ್ ಕಂಡಿಶನ್ ರಿಪೇರ್ ತರಬೇತಿಗೆ ಅರ್ಜಿ ಆಹ್ವಾನ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023