ಮೂಡಲಗಿ: ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಶೈಕ್ಷಣಿಕ ಸಹಾಯಧನ, ಇನವರ್ಟರ ಮತ್ತು ಬ್ಯಾಟರಿ ಖರೀದಿಸಿ ಅಳವಡಿಸುವುದು, ಹೊಲಿಗೆ ಮಶೀನ ಪೂರೈಸುವುದು, ವಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಸಹಾಯಧನ , ಕುಡಿಯುವ ನೀರಿನ ಸಂಪರ್ಕಕ್ಕಾಗಿ ಸಹಾಯಧನದ ಮನೆಗಳ ದುರಸ್ಥಿ ಮತ್ತು ತ್ರಿಚಕ್ರ ವಾಹನ ಸಲುವಾಗಿ ಅರ್ಹಫಲಾನುಭವಿಗಳ ಅರ್ಜಿಗಳ ಆಹ್ವಾನಿಸಲ್ಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮೂಡಲಗಿ ಪುರಸಭೆಯ ವ್ಯಾಪ್ತಿಗೆ ಒಳಪಡುವ ಅರ್ಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಶೇ.೨೪.೧೦ ಇತರೆ ಬಡಜನರ ಕಲ್ಯಾಣಕ್ಕಾಗಿ ಶೇ.೭.೨೫ ಮತ್ತು ವಿಕಲಚೇತನರ ಅಭಿವೃದ್ದಿಗಾಗಿ ಶೇ.೫ ರಡಿ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ (ಹಂತ-೪) ರಡಿ ೧) ಶೇ.೨೪.೧೦, ೫% ಯೋಜನೆಯಡಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೆಚ್ಚ ಭರಿಸುವುದು. ೨) ಶೇ.೨೪.೧೦ & ಶೇ.೭.೨೫ ರಡಿ ಹೊಲಿಗೆ ಮಶೀನ ನೀಡುವುದು. ೩) ಶೇ.೨೪.೧೦% & ಶೇ.೭.೨೫ ಯೋಜನೆಯಡಿ ಇನವರ್ಟರ ಮತ್ತು ಬ್ಯಾಟರಿ (ಯು.ಪಿ.ಎಸ್.) ಅಳವಡಿಸುವುದು. ೪) ಶೇ.೨೪.೧೦ ಯೋಜನೆಯಡಿ ಮನೆಗಳ ದುರಸ್ಥಿಗೆ ಸಹಾಯಧನ ನೀಡುವುದು. ೫) ಶೇ.೨೪.೧೦, ಶೇ.೭.೨೫ ವೈಯಕ್ತಿಕ ಶೌಚಾಲಯ ನಿರ್ಮಿಸಲು ಸಹಾಯಧನ ನೀಡುವುದು. ೬) ಇತರೆ ಬಡಜನರಿಗಾಗಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವುದು. ೭) ವಿಕಲಚೇತನರಿಗೆ ಶೇ.೫ ಯೋಜನೆಯಡಿ ತ್ರಿಚಕ್ರ ವಾಹನ ಪೂರೈಸುವ ಕುರಿತು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ದಿನಾಂಕ ೩೦-೧೨-೨೦೨೨ ರವರೆಗೆ ಆಹ್ವಾನಿಸಲಾಗಿರುತ್ತದೆ. ಅರ್ಹ ಫಲಾನುಭವಿಗಳು ಸಲ್ಲಿಸಿದ ಅರ್ಜಿಗಳನ್ನು ಅನುದಾನದ ಲಭ್ಯತೆಯ ಮೇರೆಗೆ ಮಂಜೂರು ಅಥವಾ ನಾಮಂಜೂರ ಮಾಡುವ ಅಧಿಕಾರವು ಪುರಸಭೆ ಅಧಿಕಾರಿಗಳಿಗೆ ಇರುತ್ತದೆ. ಯೋಜನೆಗಳ ಘಟಕವಾರು ವಿವರಗಳನ್ನು ಕಾರ್ಯಾಲಯದ ವೆಬ್ ಸೈಟ ತಿತಿತಿ.muಜಚಿಟಚಿgiಣoತಿಟಿ.mಡಿಛಿ.gov.iಟಿ ಹಾಗೂ ನೋಟೀಸ ಬೋರ್ಡಿಗೆ ಪ್ರಚುರಪಡಿಸಲಾಗಿದ್ದು ಹೆಚ್ಚಿನ ಮಾಹಿತಿ ಕುರಿತು ಪುರಸಭೆ ಕಾರ್ಯಾಲಯದಲ್ಲಿ ವಿಚಾರಿಸ ಬಹುದು ಎಂದು ಮುಖ್ಯಾಧಿಕಾರಿ ಅವರು ತಿಳಿಸಿದ್ದಾರೆ.
Gadi Kannadiga > Local News > ವಿವಿಧ ಯೋಜನೆಯ ಸಹಾಧನಕ್ಕಾಗಿ ಅರ್ಜಿ ಆಹ್ವಾನ