ಕೊಪ್ಪಳ ಮೇ ೨೪ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಿಂದ ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ೧೦ ದಿನಗಳ ಉಚಿತ ಮೊಬೈಲ್ ರಿಪೇರಿ, ವಿದ್ಯುತ್ ಮೋಟರ್ ರೀವೈಂಡಿಂಗ್ & ರಿಪೇರಿ ತರಬೇತಿ ಹಾಗೂ ಸಾಫ್ಟ್ ಟಾಯ್ಸ್ (ಮೃಧು ಆಟಿಕೆ) ತಯಾರಿಕಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಅರ್ಜಿದಾರರು ೧೮ ರಿಂದ ೪೫ ವರ್ಷ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು. ಕೊಪ್ಪಳ ಜಿಲ್ಲೆಯ ಗ್ರಾಮೀಣಭಾಗದವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಅರ್ಜಿ ಸಲ್ಲಿಸಲಿಚ್ಛೀಸುವ ಆಸಕ್ತರು ತಮ್ಮ ಆಧಾರಗ ಕಾರ್ಡ್ ಜೆರಾಕ್ಸ್ ಪ್ರತಿ, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿ, ಪಾಸ್‌ಪೋರ್ಟ್ ಸೈಜ್ ಮೂರು ಫೋಟೋ, ಮಾರ್ಕ್ಸಕಾರ್ಡ ಜೆರಾಕ್ಸ್ ಪ್ರತಿಯೊಂದಿಗೆ ಅರ್ಜಿಯನ್ನು ನಿರ್ದೇಶಕರು, ಸ್ಟೇಟ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ದೂ.ಸಂ: ೦೮೫೩೯-೨೩೧೦೩೮, ಇಲ್ಲಿಗೆ ಸಲ್ಲಿಸಬೇಕು.
ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಕುರಿಸಾಕಾಣಿಕೆ ತರಬೇತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಊಟ ಮತ್ತು ವಸತಿ ಉಚಿತವಾಗಿ ನೀಡಲಾಗುವುದು. ತರಬೇತಿಗಾಗಿ ಜೂನ್ ೦೫ರಂದು ಸಂದರ್ಶನ ನಡೆಯಲಿದ್ದು, ಜೂನ್ ೦೬ರಿಂದ ತರಬೇತಿ ಪ್ರಾರಂಭವಾಗಲಿವೆ ಎಂದು ಕೊಪ್ಪಳ ಎಸ್‌ಬಿಐ ಆರ್‌ಸಿಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ವಿವಿಧ ತರಬೇತಿಗೆ ಅರ್ಜಿ ಆಹ್ವಾನ
ವಿವಿಧ ತರಬೇತಿಗೆ ಅರ್ಜಿ ಆಹ್ವಾನ
Suresh24/05/2023
posted on
More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023