ಬೆಳಗಾವಿ, ಡಿ.೨೨ : ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೀನ್‌ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (ಆಂಙ-ಓUಐಒ) ಯೋಜನೆಯಡಿ ೨೦೨೨-೨೩ ನೇ ಸಾಲಿನಲ್ಲಿ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳನಿಯುಕ್ತಿ ಉಪಘಟಕದಡಿ ವಿವಿಧ ಉಚಿತ ತರಬೇತಿಗಳಿಗೆ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಷರತ್ತುಗಳು:
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ರಹವಾಸಿಯಾಗಿರಬೇಕು, ವಾರ್ಷಿಕ ಆದಾಯ ಗರಿಷ್ಠ ೧,೨೦,೦೦೦ ಮಿತಿಗೊಳಪಟ್ಟಿರಬೇಕು.(ಆದಾಯ ಪ್ರಮಾಣಪತ್ರ ಲಗತ್ತಿಸಬೇಕು), ವಯೋಮಿತಿ ೧೬ ರಿಂದ ೪೫ ವರ್ಷದೊಳಗಿನವರಾಗಿರಬೇಕು., ನಿಗದಿಪಡಿಸಿದ ಶೈಕ್ಷಣಿಕ ದಾಖಲಾತಿಗಳಿಗೆ ಪ್ರಮಾಣ ಪತ್ರಗಳನ್ನು ದೃಢೀಕರಿಸಿ ಲಗತ್ತಿಸಬೇಕು.
ಅರ್ಜಿ ನಮೂನೆಗಳಿಗಾಗಿ ಪ್ರಕಟಣೆಯ ದಿನಾಂಕದಿಂದ ೦೧ ವಾರದೊಳಗಾಗಿ ಡೇ-ನಲ್ಮ್ ಕಚೇರಿ, ಯುಪಿಎಸಿ ಶಾಖೆ, ಮಹಾನಗರ ಪಾಲಿಕೆ ಇಲ್ಲಿ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ. ಆಸಕ್ತರು ಅರ್ಜಿ ಸಲ್ಲಿಸಲು ಡಿ.೨೬ ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Gadi Kannadiga > Local News > ಡೇ-ನಲ್ಮ್ ಯೋಜನೆಯಡಿ ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ