ಕೊಪ್ಪಳ, ನವೆಂಬರ್ ೧೭ : ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ೨೦೨೨-೨೩ನೇ ಸಾಲಿಗೆ ನೂತನ ಯೋಜನೆಯಾದ ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಫಲಾನುಭವಿಗಳು ಅರ್ಜಿಗಳನ್ನು ಕಡ್ಡಾಯವಾಗಿ ವೆಬ್ಸೈಟ್: ಞಚಿಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿ ಆನ್ಲೈನ್ ಮೂಲಕ ಡಿಸೆಂಬರ್ ೧೫ ರೊಳಗೆ ಸಲ್ಲಿಸಬೇಕು.
ಆರ್ಯ ವೈಶ್ಯ ಅರ್ಜಿದಾರರು “ನಮೂನೆ-ಜಿ” ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಕರ್ನಾಟಕ ರಾಜ್ಯದವರಾಗಿದ್ದು, ಖಾಯಂ ವಿಳಾಸ ಕರ್ನಾಟಕ ರಾಜ್ಯದಲ್ಲಿರಬೇಕು. ಮೊಬೈಲ್ ಸಂಖ್ಯೆಯನ್ನು ಹಾಗೂ ಬ್ಯಾಂಕ್ ಖಾತೆಯನ್ನು ಆಧಾರ್ಗೆ ಜೋಡಣೆ ಮಾಡಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ.೬,೦೦,೦೦೦/-ಗಳ ಮಿತಿ ಒಳಗಿರಬೇಕು. ಅರ್ಜಿದಾರರು ೨೧ ರಿಂದ ೫೫ ವರ್ಷ ಒಳಗಿನವರಾಗಿರಬೇಕು. ಒಂದು ಕುಟುಂಬದಲ್ಲಿ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಡ್ರೆöÊವಿಂಗ್ ಲೈಸೆನ್ಸ್ ಉಳ್ಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಾದ ಫಲಾನುಭವಿಯು ಬ್ಯಾಂಕ್ನಿಂದ ಅವರ ಷರತ್ತಿನನ್ವಯ ಸಾಲ ಪಡೆಯಬೇಕಾಗಿರುತ್ತದೆ. ಅಭ್ಯರ್ಥಿಯು ಕಡ್ಡಾಯವಾಗಿ ನೂತನ ವಾಹನವನ್ನು ಖರೀದಿಸಬೇಕು. ಆಹಾರ ವಾಹಿನಿಯನ್ನು ೦೫ ವರ್ಷಗಳ ಅವಧಿಯೊಳಗೆ ಮಾರಾಟ ಮಾಡಬಾರದು. ಆಹಾರ ವಾಹಿನಿಗಳನ್ನು ಪ್ರಾರಂಭಿಸಲು ಫ್ರಾಂಚೈಸಿ ಪಡೆಯಲು ಸಹ ಅವಕಾಶವಿರುತ್ತದೆ. ನಿಗಮದಿಂದ ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.
ಮಹಿಳೆಯರಿಗೆ ಶೇ.೩೩ ರಷ್ಟು, ವಿಶೇಷಚೇತನರಿಗೆ ಶೇ.೫ ರಷ್ಟು ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳಿಗೆ ಶೇ.೫ ರಷ್ಟು ಮೀಸಲಾತಿ ಇರುತ್ತದೆ. ಆಹಾರ ವಾಹಿನಿ ಪ್ರಾರಂಭಿಸಲು ಆಯ್ಕೆಯಾದ ಫಲಾನುಭವಿಗಳಿಗೆ ೨ ಕಂತುಗಳಲ್ಲಿ ತ್ರಿಚಕ್ರ ವಾಹನ (ಡೀಸೆಲ್)-೧.೫೦ ಲಕ್ಷ, ತ್ರಿಚಕ್ರ ವಾಹನ (ಎಲೆಕ್ಟ್ರಿಕ್)-೨.೦೦ ಲಕ್ಷ ಹಾಗೂ ನಾಲ್ಕು ಚಕ್ರ ವಾಹನ (ಡೀಸೆಲ್/ ಎಲೆಕ್ಟ್ರಿಕ್/ಸಿ.ಎನ್.ಜಿ)-೨.೦೦ ಲಕ್ಷಗಳಂತೆ ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ನಿಗಮದ ಕೇಂದ್ರ ಕಛೇರಿ, ಬೆಂಗಳೂರು ರವರ ಸಹಾಯವಾಣಿ: ೯೪೪೮೪೫೧೧೧೧, ನಿಗಮದ ಜಿಲ್ಲಾ ಕಛೇರಿ, ಕೊಪ್ಪಳ ಸಹಾಯವಾಣಿ ಸಂಖ್ಯೆ: ೦೮೫೩೯-೨೨೧೮೪೭ ಗೆ ಸಂಪರ್ಕಿಸಬಹುದು. ಯೋಜನೆಗಳ ಮಾರ್ಗಸೂಚಿಗಳು, ಸಲ್ಲಿಸಬೇಕಾದ ದಾಖಲೆಗಳು, ಜಿಲ್ಲಾ ವ್ಯವಸ್ಥಾಪಕರ ಕಛೇರಿ ವಿಳಾಸಗಳನ್ನು ಹಾಗೂ ಎಲ್ಲಾ ವಿವರಗಳನ್ನು ಮೇಲ್ಕಂಡ ಜಾಲತಾಣದಲ್ಲಿ ಪಡೆಯಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಆರ್ಯ ವೈಶ್ಯ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ