This is the title of the web page
This is the title of the web page

Please assign a menu to the primary menu location under menu

Local News

ವಿವಿಧ ನಿಗಮಗಳಿಂದ ಸಾಲ ಸೌಲಭ್ಯ: ಅರ್ಹರಿಂದ ಅರ್ಜಿ ಆಹ್ವಾನ


ಬೆಳಗಾವಿ,ಜುಲೈ೨೧: ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಮತ್ತು ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ/ಅಲೆಮಾರಿ ಅಭಿವೃದ್ಧಿ ಕೋಶದ ವತಿಯಿಂದ ಅರ್ಹ ಫಲಾನುಭವಿಗಳಿಗೆ ೨೦೨೨-೨೩ನೇ ಸಾಲಿಗೆ ವಿವಿಧ ಯೋಜನೆಗಳಿಗೆ ಜುಲೈ ೧೮ ೨೦೨೨ ರಿಂದ ಆಗಸ್ಟ್ ೨೦ ೨೦೨೨ರೊಳಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಡಾ:ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ವತಿಯಿಂದ ೨೦೨೨-೨೩ ನೇ ಸಾಲಿಗೆ ೧೮ ರಿಂದ ೬೦ ವರ್ಷದೊಳಗಿನ ಅರ್ಹ ಪ.ಜಾತಿಯ ಆರ್ಥಿಕ ಸಬಲೀಕರಣಕ್ಕಾಗಿ ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ನೇರ ಸಾಲ ಯೋಜನೆ: ಸಣ್ಣ ಆದಾಯಗಳಿಸುವ ಆರ್ಥಿಕ ಚಟುವಟಿಕೆಗಳಿಗಾಗಿ ಘಟಕ ವೆಚ್ಚ ಗರಿಷ್ಟ ರೂ.೧.೦೦ ಲಕ್ಷಗಳು ಇದರಲ್ಲಿ ೫೦% ಸಾಲ ಮತ್ತು ೫೦% ಸಹಾಯಧನ. ಉದ್ಯಮ ಶೀಲತಾ ಯೋಜನೆ (ಐ.ಎಸ್.ಬಿ)–೧: ಇ.ವಿ ಮತ್ತು ಇತರೆ ದ್ವಿಚಕ್ರ ವಾಹನ ಖರೀದಿ (ಇ-ಕಾಮರ್ಸ್ನಡಿಯಲ್ಲಿ ಕಂಪನಿಗಳಿಂದ ಗ್ರಾಹಕರಿಗೆ ಸರಕು ತಲುಪಿಸಲು) ಗರಿಷ್ಟ ರೂ.೫೦,೦೦೦/- ಸಹಾಯಧನ, ಉಳಿದ ಮೊತ್ತ ಬ್ಯಾಂಕ್ ಸಾಲ. ಐ.ಎಸ್.ಬಿ ಚಟುವಟಿಕೆಗಳಿಗಾಗಿ: ಗರಿಷ್ಟ ರೂ. ೨.೦೦ ಲಕ್ಷ, ಸಹಾಯಧನ ಉಳಿದ ಮೊತ್ತ ಬ್ಯಾಂಕ್‌ನಿಂದ ಸಾಲ. ಸರಕು ಸಾಗಾಣಿಕೆ ವಾಹನ: ಗರಿಷ್ಟ ರೂ. ೩.೫೦ ಲಕ್ಷ, ಸಹಾಯಧನ ಉಳಿದ ಮೊತ್ತ ಬ್ಯಾಂಕ್ ಸಾಲ. ಮೈಕ್ರೋ ಕ್ರೆಡಿಟ್ ಯೋಜನೆ: ಮಹಿಳೆಯರಲ್ಲಿ ಗುಂಪು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡಿ ಆದಾಯ ಗಳಿಸಲು ಅನುವಾಗುವಂತೆ ಕನಿಷ್ಟ ೧೦ ಸದಸ್ಯರಿರುವ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಗರಿಷ್ಟ ರೂ.೨.೫೦ ಲಕ್ಷಗಳನ್ನು ಮಂಜೂರು ಮಾಡಲಾಗುವುದು. ಇದರಲ್ಲಿ ರೂ.೧.೫೦ ಲಕ್ಷ ಸಹಾಯಧನ ಮತ್ತು ರೂ.೧.೦೦ ಲಕ್ಷ ಸಾಲ. ಭೂ ಒಡೆತನ ಯೋಜನೆ: ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಕನಿಷ್ಟ ಒಂದು ಎಕರೆ ತರಿ/ಅರ್ಧ ಎಕರೆ ಭಾಗಯ್ತು ಅಥವಾ ಎರಡು ಎಕರೆ ಖುಷ್ಕಿ ಅಥವಾ ಘಟಕ ವೆಚ್ಚದಂತೆ ಲಭ್ಯವಾಗುವ ಜಮೀನನ್ನು ಖರೀದಿಸಿ ಕೊಡಲಾಗುವುದು. ಗಂಗಾ ಕಲ್ಯಾಣ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಖುಷ್ಕಿ/ ಒಣ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಆಯಾ ನಿಗಮದ ಸಮುದಾಯಕ್ಕೆ ಸೇರಿದ ಫಲಾಪೇಕ್ಷಿಗಳು ಈ ಕೆಳಕಂಡ ವೆಬ್‌ಸೈಟ್‌ಗಳಲ್ಲಿ ಆನ್‌ಲೈನ್‌ನಲ್ಲಿ ಸಂಬಂಧಪಟ್ಟ ಯೋಜನೆಗಳಿಗೆ ಅಗತ್ಯ ದಾಖಲಾತಿಗಳಾದ ೧)ಜಾತಿ ಮತ್ತು ಆಧಾಯ ೨)ಪಡಿತರ ಚೀಟಿ, ೩)ಆಧಾರ ಕಾರ್ಡ, ಓಟರ ಐಡಿ, ೪)ಬ್ಯಾಂಕ ಪಾಸ್‌ಬುಕ್ ಪ್ರತಿ ೫)ವಾಹನವಾಗಿದ್ದಲ್ಲಿ ಡ್ರಾವಿಂಗ್ ಲೈಸೆನ್ಸ್, ಗಂಗಾ ಕಲ್ಯಾಣ ಯೋಜನೆಗೆ ಜಮೀನಿನ ಪಹಣಿ ಅಪ್‌ಲೋಡ್‌ಮಾಡಿ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಸಲ್ಲಿಸಬೇಕಾದ ವೆಬ್‌ಸೈಟ್ ವಿಳಾಸ: hಣಣಠಿs://suviಜhಚಿ.ಞಚಿಡಿಟಿಚಿಣಚಿಞಚಿ.gov.iಟಿ ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ-hಣಣಠಿ://ಚಿಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ-hಣಣಠಿs://bಚಿಟಿರಿಚಿಡಿಚಿಣhಚಿಟಿಜಚಿ.ಞಚಿಡಿ.gov.iಟಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ-hಣಣಠಿs://ಞಜbಛಿ.ಞಚಿಡಿಟಿಚಿಣಚಿಞಚಿ.gov.iಟಿ, ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ/ಅಲೆಮಾರಿ ಕೋಶ- hಣಣಠಿ://ಚಿಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ-hಣಣಠಿs://ಞssಞಜಛಿ.ಞಚಿಡಿಟಿಚಿಣಚಿಞಚಿ.gov.iಟಿ., ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ-hಣಣಠಿs://ಚಿಜiರಿಚಿmbಚಿvಚಿ.ಞಚಿಡಿಚಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.
ಅರ್ಜಿ ಸಲ್ಲಿಸಲು ೨೦ ಆಗಸ್ಟ್ ೨೦೨೨ ಕೊನೆಯ ದಿನಾಂಕವಾಗಿದ್ದು, ಮೇಲ್ಕಂಡ ವೆಬ್‌ಸೈಟ್‌ಗಳಲ್ಲಿ ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸುವುದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಛೇರಿ ರೂ ನಂ:೧೨೩ ೧ನೇ ಮಹಡಿ ಸುವರ್ಣ ವಿಧಾನಸೌಧ ಹಲಗಾ ಬೆಳಗಾವಿ-೨೦ ದೂರವಾಣಿ ಸಂಖ್ಯೆ:೦೮೩೧೨೪೭೧೧೯೧ ಹಾಗೂ ಕಲ್ಯಾಣ ಮಿತ್ರ ಸಹಾಯವಾಣಿ-೯೪೮೨೩೦೦೪೦೦ ಇವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply