This is the title of the web page
This is the title of the web page

Please assign a menu to the primary menu location under menu

State

ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ


ಗದಗ ಮಾರ್ಚ ೨೮: ಭಾರತೀಯ ವಾಯುದಳದಲ್ಲಿ “ಅಗ್ನಿಪತ್” ಯೋಜನೆಯಡಿ “ಅಗ್ನಿವೀರ್” ವಾಯು ಪ್ರವೇಶಕ್ಕೆ ಭಾರತೀಯ ಅರ್ಹ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆನ್‌ಲೈನ್ ಮೂಲಕ ಆಯ್ಕೆ ಪರೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಜಿಲ್ಲೆಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಯೋಮಿತಿ ದಿ:೨೬-೧೨-೨೦೦೨ ರಿಂದ ದಿ:೨೬-೦೬-೨೦೦೬ರ ಒಳಗೆ ಜನಿಸಿದವರಾಗಿರಬೇಕು (ಎರಡು ದಿನಾಂಕಗಳನ್ನು ಒಳಗೊಂಡಂತೆ).
ವಿಜ್ಞಾನದ ವಿಷಯದಲ್ಲಿ-ವಿದ್ಯಾರ್ಹತೆ ಪಿಯುಸಿ ತೇರ್ಗಡೆ ಹೊಂದಿರಬೇಕು ಹಾಗೂ ಪಿಯುಸಿ ಯಲ್ಲಿ ಗಣಿತ, ,ಭೌತಶಾಸ್ತ್ರ, ಇಂಗ್ಲೀಷ್ ವಿಷಯಗಳಲ್ಲಿ ಕನಿಷ್ಟ ಶೇ.೫೦ ಅಂಕ ಪಡೆದಿರಬೇಕು ಇಂಗ್ಲೀಷ್ ನಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ತೇರ್ಗಡೆ. ಅಥವಾ ೩ ವರ್ಷದ ಡಿಪ್ಲೋಮದಲ್ಲಿ ತೇರ್ಗಡೆ ಹೊಂದಿರಬೇಕು ಅದರಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ತೇರ್ಗಡೆ ಮತ್ತು ಇಂಗ್ಲೀಷ್ ನಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು ಅಥವಾ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಗಣಿತ,ಭೌತಶಾಸ್ತ್ರ,ವಿಷಯಗಳಲ್ಲಿ ಕನಿಷ್ಟ ಶೇ.೫೦ ಅಂಕ ಪಡೆದಿರಬೇಕು ಇಂಗ್ಲೀಷ್ ನಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ವಿಜ್ಞಾನೇತರ ವಿಷಯದಲ್ಲಿ-ಪಿಯುಸಿ ಯಾವುದೇ ವಿಷಯದಲ್ಲಿ ಕನಿಷ್ಟ ಶೇ.೫೦ ಅಂಕ ಪಡೆದಿರಬೇಕು ಇಂಗ್ಲೀಷ್ ನಲ್ಲಿ ಕನಿಷ್ಟ ಶೇ.೫೦ ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು. ಪುರುಷ ಅಭ್ಯರ್ಥಿಗಳಿಗೆ- ಎತ್ತರ ೧೫೨.೫ ಸೆಂ.ಮಿ ತೂಕ ಎತ್ತರಕ್ಕೆ ಅನುಗುಣವಾಗಿ ಇರತಕ್ಕದ್ದು, ಮಹಿಳಾ ಅಭ್ಯರ್ಥಿಗಳಿಗೆ- ಎತ್ತರ ೧೫೨ ಸೆಂ.ಮಿ ತೂಕ ಎತ್ತರಕ್ಕೆ ಅನುಗುಣವಾಗಿ ಇರತಕ್ಕದ್ದು, ಅರ್ಜಿ ಶುಲ್ಕ ೨೫೦/- ರೂ ಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ೩೧-೦೩-೨೦೨೩ ರೊಳಗೆ hಣಣಠಿs://ಚಿgಟಿiಠಿಚಿಣhvಚಿಥಿu.ಛಿಜಚಿಛಿ.iಟಿ ವೆಬ್‌ಸೈಟ್ ನಲ್ಲಿ ಸಲ್ಲಿಸಬೇಕು. ಆನ್‌ಲೈನ್ ಪರೀಕ್ಷೆ ಮೇ ೨೦ ರಿಂದ ಪ್ರಾರಂಭವಾಗಲಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗಾಧಿಕಾರಿಗಳು, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗದಗ ಕಚೇರಿ ದೂರವಾಣಿ ಸಂಖ್ಯೆ ೦೮೩೭೨-೨೨೦೬೦೯ ರವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.


Leave a Reply