This is the title of the web page
This is the title of the web page

Please assign a menu to the primary menu location under menu

State

ವಿದ್ಯಾಸಿರಿ ಯೋಜನೆಯಡಿ ಸೇವಾಸಿಂಧು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ


ಗದಗ ಸೆಪ್ಟೆಂಬರ್ ೧೯: ೨೦೨೨-೨೩ ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪರ್ಸಿಯನ ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಸೇವಾ ಸಿಂಧು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯಗಳಲ್ಲಿ ಸೌಲಭ್ಯಕ್ಕೆ ಸಹಾಯ ಒದಗಿಸಲು ಒಬ್ಬ ವಿದ್ಯಾರ್ಥಿಗೆ ಒಂದು ತಿಂಗಳಿಗೆ ೧೫೦೦/- ರಂತೆ ಶೈಕ್ಷಣಿಕ ಅವಧಿಯ ೧೦ ತಿಂಗಳಿಗೆ ಒಟ್ಟು ರೂ. ೧೫,೦೦೦/- ಗಳ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೦ ಆಗಿದ್ದು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಗದಗನಲ್ಲಿ ಇರುವ (ಮಾಹಿತಿ ಕೇಂದ್ರದಲ್ಲಿ) ಸಂಪರ್ಕಿಸಬಹುದು.
ಅರ್ಜಿಗಳನ್ನು ಸೇವಾಸಿಂಧು ಆನ್‌ಲೈನ್ ಮೂಲಕ ಸಲ್ಲಿಸಿ ಒಂದು ಪ್ರತಿಯನ್ನು ಅಕ್ಟೋಬರ್ ೨೧ ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸತಕ್ಕದ್ದು. ಹೆೆಚ್ಚಿನ ವಿವರಗಳಿಗೆ ಕೆಳಕಂಡ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ. ೦೮೩೭೧-೨೬೨೯೧೧ ತಾಲೂಕ ಪಂಚಾಯತಿ ಆವರಣ, ಮುಂಡರಗಿ. ; ೦೮೩೭೨-೨೯೭೪೯೪ ಮೌಲಾನಾ ಆಝಾದ ಭವನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ; ೦೮೩೮೧-೨೬೭೨೫೮ ತಾಲೂಕ ಪಂಚಾಯತಿ ಆವರಣ, ರೋಣ ; ೦೮೩೭೭-೨೪೫೪೧೧ ತಹಶೀಲ್ದಾರ ಕಾರ್ಯಾಲಯ ರೂ.ನಂ:೨೦, ನರಗುಂದ ; ೦೮೪೮೭-೨೪೨೮೧೦ ತಾಲೂಕ ಪಂಚಾಯತ ಹತ್ತಿರ, ಶಿರಹಟ್ಟಿ .


Gadi Kannadiga

Leave a Reply