This is the title of the web page
This is the title of the web page

Please assign a menu to the primary menu location under menu

Local News

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತೋಟಗಾರಿಕೆ ಚಟುವಟಿಕೆ ಕೈಗೊಳ್ಳಲು ಅರ್ಜಿ ಆಹ್ವಾನ


ಬೆಳಗಾವಿ, ಜು.೦೭ : ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ೨೦೨೩-೨೪ನೇ ಸಾಲಿಗೆ ತೋಟಗಾರಿಕೆ ಚಟುವಟಿಕೆಗಳಾದ ವಿವಿಧ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆ ಕೈಗೊಳ್ಳಲು ಕೂಲಿ ಮತ್ತು ಸಾಮಗ್ರಿ ವೆಚ್ಚವನ್ನು ನೀಡಲಾಗುತ್ತಿದೆ.
ಸದರಿ ಯೋಜನೆಯಡಿ ದ್ರಾಕ್ಷಿ, ಬಾಳೆ, ದಾಳಿಂಬೆ, ಮಾವು, ಸೀಬೆ, ಚಿಕ್ಕು, ನಿಂಬೆ, ಡ್ರಾö್ಯಗನ್, ಕರಿಬೇವು, ಗುಲಾಬಿ, ನುಗ್ಗೆ, ಜಾಮೂನು, ಹುಣಸೆ, ಸೀತಾಫಲ, ಗೇರು, ತೆಂಗು, ಅಡಿಕೆ, ತಾಳೆ, ಪಪ್ಪಾಯಿ, ಕೋಕೊ, ಹಲಸು, ಕಾಫಿ ಹಾಗೂ ಅಪ್ರಧಾನ ಹಣ್ಣಿನ ಬೆಳೆಗಳಾದ ನೇರಳೆ, ನೆಲ್ಲಿ, ಬೆಣ್ಣೆ ಹಣ್ಣು, ರಾಮಬುತಾನ, ಅಪ್ಪೆಮಿಡಿ ಬೆಳೆಗಳು ಮತ್ತು ಸಾಂಬಾರು ಬೆಳೆಗಳಾದ ದಾಲಚಿನ್ನಿ, ಲವಂಗ, ಕಾಳುಮೆಣಸು, ಜಾಯಿಕಾಯಿ, ಸರ್ವಸಾಂಬಾರ (ಂಟಟ sಠಿiಛಿe) ಬೆಳೆಗಳ ಹೊಸ ತೋಟಗಳನ್ನು ಅಭಿವೃದ್ಧಿಪಡಿಸಲು ಹಾಗೂ ವಿವಿಧ ತೋಟಗಾರಿಕೆ ಬೆಳೆಗಳಾದ ಮಾವು, ಚಿಕ್ಕು, ತೆಂಗು, ನಿಂಬೆ, ಅಡಿಕೆ, ತಾಳೆ ಮತ್ತು ಗೋಡಂಬಿ ಬೆಳೆಗಳ ಪುನಃಶ್ಚೇತನ ಕಾಮಗಾರಿಗಳನ್ನು ಸಹ ಸದರಿ ಯೋಜನೆಯಲ್ಲಿ ತೆಗೆದುಕೊಳ್ಳಲು ಒಂದು ಒಳ್ಳೆಯ ಸದಾವಕಾಶವಿರುತ್ತದೆ.
ಸದರಿ ತೋಟಗಳಿಗೆ ನೀರಾವರಿ ಅನುಕೂಲಕ್ಕಾಗಿ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಲು ಸಹ ಇಲಾಖೆಯ ಪಿ.ಎಂ.ಕೆ.ಎಸ್.ವೈ. ಯೋಜನೆಯಡಿ ಸಹಾಯಧನವನ್ನು ನೀಡಲಾಗುವುದು. ಆಸಕ್ತ ರೈತರು ಹೆಚ್ಚಿನ ಮಾಹಿತಿ ಹಾಗೂ ಅರ್ಹತಾ ಮಾನದಂಡದ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ತಾಲೂಕಿನ ಕಛೇರಿಯನ್ನು ಹಾಗೂ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply