This is the title of the web page
This is the title of the web page

Please assign a menu to the primary menu location under menu

Local News

ಬೌದ್ಧ ವಿಹಾರ ನವೀಕರಣ-ಸಮುದಾಯ ಭವನ ನಿರ್ಮಾಣಕ್ಕೆ ಸಮುದಾಯದಿಂದ ಅರ್ಜಿ ಆಹ್ವಾನ


ಬೆಳಗಾವಿ,ಜುಲೈ೨೬: ೨೦೨೨-೨೩ನೇ ಸಾಲಿಗೆ ಬೌದ್ಧ ಸಮುದಾಯ ಅಭಿವೃದ್ಧಿ ಯೋಜನೆಯಡಿ ಬೌದ್ಧ ವಿಹಾರಗಳ ದುರಸ್ಥಿ/ನವೀಕರಣ ಹಾಗೂ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ಬೌದ್ಧ ಸಮುದಾಯದವರಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
ಸದರಿ ಪ್ರಸ್ತಾವನೆಗಳನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಜುಲೈ ೩೧ ೨೦೨೨ ರೊಳಗಾಗಿ ಸಲ್ಲಿಸಲು ನಿರ್ದೇಶಕರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಇವರು ಸೂಚಿಸಿರುವುದರಿಂದ ಬೌದ್ಧ ವಿಹಾರಗಳ ದುರಸ್ಥಿ/ನವೀಕರಣ ಹಾಗೂ ಸಮುದಾಯ ಭವನ ನಿರ್ಮಾಣಗಳಿಗೆ ಸಹಾಯಧನ ಪಡೆಯಲು ಇಚ್ಛಿಸುವ ಅರ್ಹ ಬೌದ್ಧ ಸಮುದಾಯದವರು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಳಗಾವಿ ರವರ ಕಾರ್ಯಾಲಯದಿಂದ ಅರ್ಜಿಗಳನ್ನು ಪಡೆದು ಜುಲೈ ೩೦ ೨೦೨೨ ರೊಳಗಾಗಿ ಅಲ್ಪಸಂಖ್ಯಾತರ ಕಾರ್ಯಾಲಯ, ಮೌಲಾನಾ ಆಜಾದ್ ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ, ಬೆಳಗಾವಿ-೫೯೦೦೧೬ ಇಲ್ಲಿ ಸಲ್ಲಿಸಬೇಕಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಾರ್ಯಾಲಯಕ್ಕೆ ಅಥವಾ ಕಛೇರಿ ದೂರವಾಣಿ ಸಂಖ್ಯೆ; ೦೮೩೧-೨೯೫೦೩೪೯ ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ


Gadi Kannadiga

Leave a Reply