This is the title of the web page
This is the title of the web page

Please assign a menu to the primary menu location under menu

Local News

ಸಾಲರೂಪದ ವಿದ್ಯಾರ್ಥಿ ವೇತನ: ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ


ಬೆಳಗಾವಿ, ಜೂ.೩೦: ನವಲಗುಂದ ಶಿರಸಂಗಿ ಲಿಂಗರಾಜ ಟ್ರಸ್ಟ ಕಾರ್ಯಾಲಯ ಹಳೆ ಜಿಲ್ಲಾ ಪಂಚಾಯತ ಕಟ್ಟಡ ಡಿ.ಸಿ. ಕಂಪೌಡ ಬೆಳಗಾವಿ ವತಿಯಿಂದ ಅರ್ಹ ಲಿಂಗಾಯತ ವಿದ್ಯಾರ್ಥಿಗಳು ಮಾತ್ರ ವೈದ್ಯಕೀಯ/ತಾಂತ್ರಿಕ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ, ತಾಂತ್ರಿಕತೆಯಲ್ಲಿ ಡಿಪ್ಲೊಮಾ ಓದುತ್ತಿದ್ದಲ್ಲಿ ಅವರಿಂದ ೨೦೨೩-೨೦೨೪ ನೇ ಸಾಲಿನ ಸಾಲರೂಪದ ಶಿಷ್ಯ ವೇತನ ಮಂಜೂರಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸದರಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸಪ್ಟೆಂಬರ್.೩೦ ೨೦೨೩ ಇರುತ್ತದೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ ೦೮೩೧-೨೪೨೫೮೪೧ ಗೆ ಸಂಪರ್ಕಿಸಬಹುದು ಅಥವಾ ಮೇಲಿನ ವಿಳಾಸಕ್ಕೆ ಪತ್ರ ವ್ಯವಹಾರ ಮಾಡಬಹುದು. ಅರ್ಜಿಗಳನ್ನು ರೂ.೫೦/- ಒಔ ಮೂಲಕ ಸದರಿ ಟ್ರಸ್ಟ ಕಾರ್ಯಾಲಯದದಿಂದ ಪಡೆಯಬಹುದು. ಅಂಚೆ ಕಛೇರಿಗೆ ಹೋಗಿ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ನವಲಗುಂದ ಶಿರಸಂಗಿ ಟ್ರಸ್ಟ ಬೆಳಗಾವಿ” ಹೆಸರಲ್ಲಿ ಒಔ ಮಾಡಬೇಕು. ಸದರಿ ಸಾಲ ರೂಪದ ಶಿಷ್ಯವೇತನವನ್ನು ಪಡೆದ ೧೦ ವರ್ಷಗಳಲ್ಲಿ ಒಂದುವರೆ ಪಟ್ಟು ಮರು ಪಾವತಿ ಮಾಡಬೇಕಾಗುತ್ತದೆ.
ಶೈಕ್ಷಣಿಕ ವ್ಯಾಸಂಗ ಮತ್ತು ಶಿಷ್ಯ ವೇತನದ ವಿವರ:
ಎಂಡಿ, ಎಂ ಎಸ್, ಎಂಬಿಬಿಎಸ್, ಎಂಇ, ಎಂಟೆಕ್, ಬಿಇ, ಬಿಟೆಕ್, ಬಿಡಿಎಸ್, ಎಂಡಿಎಸ್,ಬಿಎಎಂಎಸ್, ಬಿಎಚೆಎಂಎಸ್, ಃಗಿSಛಿ&ಂಊ/ಒಗಿSಛಿ&ಂಊ, ಎಂಎಸ್ಸಿ ಅಗ್ರಿ, ಎಂಬಿಎ, ಎಂಸಿಎ, ಎಂಎಸ್‌ಡಬ್ಲೂ, ಎಂಎಸ್ಸಿ, ಎಂಕಾಂ, ಎಂಫಾರ್ಮಾ, ಬಿಎಸ್ಸಿ ಅಗ್ರಿ, ಬಿಫಾರ್ಮಾ, ಬಿಎಸ್ಸಿ ನರ್ಸಿಂಗ್, ಡಿಪ್ಲೋಮಾ, ಡಿಫಾರ್ಮಾ, ಎನ್‌ಟಿಟಿಎಫ್, ಬಿಎಸ್ಸಿ, ಬಿಕಾಂ, ಐಟಿಐ, ಬಿಸಿಎ, ಬಿಬಿಎ ಕೋರ್ಸುಗಳಿಗೆ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಕಟ್ಟಿದ ಕನಿಷ್ಠ ೯೦% ರಷ್ಟು ಅಥವಾ ಗರಿಷ್ಟ ರೂ.೧,೦೦,೦೦೦/-(ಒಂದು ಲಕ್ಷ ರೂಪಾಯಿ) ಮೀರದಂತೆ ಸಾಲರೂಪದ ವಿದ್ಯಾರ್ಥಿ ವೇತನವನ್ನು ನೀಡಲಾಗುವದು ಎಂದು ನವಲಗುಂದ ಶಿರಸಂಗಿ ಟ್ರಸ್ಟ ಜಿಲ್ಲಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply