This is the title of the web page
This is the title of the web page

Please assign a menu to the primary menu location under menu

Local News

ಅಮೃತ ನಗರೋತ್ಥಾನ: ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ


ಬೆಳಗಾವಿ, ಡಿ.೦೬ : ಯರಗಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಅರ್ಹ ಪರಿಶಿಷ್ಟ್ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದವರಿಗೆ ಹಾಗೂ ವಿಕಲಚೇತನರ ಫಲಾನುಭವಿಗಳ ಅಭಿವೃದ್ಧಿಗಾಗಿ ಮುಖ್ಯ ಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-೪ರ ಶೇ೨೪.೧೦%, ಶೇ.೭.೨೫% ಮತ್ತು ಶೇ.೫% ಅನುದಾನದಡಿ ವಿವಿಧ ವೈಯಕ್ತಿಕ ಸೌಲಭ್ಯ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ.ಜಾ/ಪ.ಪಂ ಜನಾಂಗದ ಶೇ.೨೪.೧೦% ಯೋಜನೆಯಡಿ ವೈಯಕ್ತಿಕ ಶೌಚಲಯ ನರ‍್ಮಾಣಕ್ಕೆ ಸಹಾಯಧನ, .ಪಕ್ಕಾ ಮನೆ ನರ‍್ಮಾಣಕ್ಕೆ ಸಹಾಯಧನ, ಕಚ್ಚಾ ಮನೆ ಮೇಲ್ಚಾವಣಿ ದುರಸ್ತಿಗೆ ಸಹಾಯಧನ, ಸಣ್ಣ ಉದ್ದಿಮೆ ಆರಂಭಿಸಲು ಬ್ಯಾಂಕ ಸಾಲಕ್ಕೆ ಸಹಾಯಧನ, ಭಾರಿ ಶಸ್ತ್ರ ಚಿಕಿತ್ಸೆಗೆ ಸಹಾಯಧನ, ಎಂ.ಬಿ.ಬಿ.ಎಸ್/ಬಿ.ಇ ವಿದ್ಯಾರ್ಥಿಗಳಿಗೆ ಲ್ಯಾಪಟಾಪ ಖರೀದಿಗೆ ಸಹಾಯಧನ, ಕೌಶಲ್ಯಾಭಿವೃದ್ಧಿ ತರಬೇತಿ, ಮನೆಗಳಿಗೆ ಸೋಲಾರ ಲೈಟ್ ಸಂಪರ್ಕ, ಪ.ಪಂ. ನಿವೇಶನ ಖರೀದಿಗೆ ಸಹಾಯಧನ ನೀಡಲಾವುದು.
ಅದೇ ರೀತಿಯಲ್ಲಿ ಇತರೆ ಬಡಜನರ ೭.೨೫%ರ ಯೋಜನೆಯಡಿ ವೈಯಕ್ತಿಕ ಶೌಚಾಲಯ ನರ‍್ಮಾಣಕ್ಕೆ ಸಹಾಯಧನ, ನಿವೇಶನ ಖರೀದಿಗೆ ಸಹಾಯಧನ, ಪಕ್ಕಾ ಮನೆ ನರ‍್ಮಾಣಕ್ಕೆ ಸಹಾಯಧನ ಹಾಗೂ ವಿಕಲಚೇತನರ ೫%ರ ಯೋಜನೆಯಡಿ ವೈಯಕ್ತಿಕ ಶೌಚಾಲಯ ನರ‍್ಮಾಣಕ್ಕೆ ಸಹಾಯಧನ, ನಿವೇಶನ ಖರೀದಿಗೆ ಸಹಾಯಧನ, ಪಕ್ಕಾ ಮನೆ ನರ‍್ಮಾಣಕ್ಕೆ ಸಹಾಯಧನ, ಸಣ್ಣ ಉದ್ದಿಮೆ ಪ್ರಾರಂಬಿಸಲು ಸಹಾಯಧನ ಜೀವ ವಿಮೆ ಕಂತು ಪಾವತಿಗೆ ಸಹಾಯಧನ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಫಲಾನುಭವಿಗಳು ಡಿಸೆಂಬರ್ ಸಂಜೆ ೫ ಗಂಟೆಯೋಳಗೆ ನಿಗಧಿತ ನಮೂನೆಗಳಲ್ಲಿ ಅವಶ್ಯಕ ದಾಖಲಾತಿಗಳೊಂದಿಗೆ ಈ ಕಾರ್ಯಾಲಯದಲ್ಲಿ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅಪೂರ್ಣವಾದ ಹಾಗೂ ದಿನಾಂಕ ಮೀರಿದ ಮತ್ತು ಅವಶ್ಯಕ ದಾಖಲಾತಿಗಳಿಲ್ಲದ ಅರ್ಜಿಗಳನ್ನು ಪರಿಗಣಿಸಲಾವುದಿಲ್ಲ ಎಂದು ಯರಗಟ್ಟಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply