This is the title of the web page
This is the title of the web page

Please assign a menu to the primary menu location under menu

Local News

ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿAದ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ


ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದಿಂದ ಕಿರುಸಾಲ ಯೋಜನೆಯಡಿ ಸ್ತ್ರೀ ಶಕ್ತಿ ಗುಂಪುಗಳ ಬಲವರ್ಧನೆ ಮತ್ತು ಸಬಲೀಕರಣಕ್ಕಾಗಿ ಆದಾಯೋತ್ಪನ್ನ ಚಟುವಟಿಕೆಗಳ ಘಟಕ/ಸಣ್ಣ ಉದ್ದಿಮೆಯನ್ನು ಸ್ಥಾಪಿಸಲು ನಿಗಮದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲವನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2018-19 ನೇ ಸಾಲಿನಲ್ಲಿ ಪರಿಶಿಷ್ಟ ಪಂಗಡ ಉಪಯೋಜನೆಯಲ್ಲಿ ಉಳಿಕೆಯಾದ ಅನುದಾನದಲ್ಲಿ ಪರಿಶಿಷ್ಟ ಪಂಗಡದ, ಉಳಿದ ಗುರಿ 2 ಮತ್ತು 2019-20 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯಡಿ ಉಳಿಕೆಯಾದ ಅನುದಾನದಲ್ಲಿ ಪರಿಶಿಷ್ಟ ಜಾತಿ ಉಳಿಕೆ ಗುರಿ – 7 ಹಾಗೂ ಪರಿಶಿಷ್ಟ ಪಂಗಡದ ಉಳಿಕೆ ಗುರಿ 2, ಒಟ್ಟು 11 ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಆಯ್ಕೆ ಬಾಕಿ ಉಳಿದಿವೆ.

ಸಾಲ ಪಡೆಯಲು ಬೇಕಾದ ಅರ್ಹತೆಗಳು : ಸ್ತ್ರೀ ಶಕ್ತಿ ಗುಂಪುಗಳು ಬ್ಯಾಂಕ್ ಖಾತೆಯನ್ನು ಹೊಂದಿದ್ದು, ಚಾಲ್ತಿಯಲ್ಲಿರಬೇಕು. ಗುಂಪಿನ ಸದಸ್ಯರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು, ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ, ಬ್ಯಾಂಕುಗಳಲ್ಲಿ ಸಾಲಗಾರರಾಗಿರಬಾರದು, ಈಗಾಗಲೇ ಕಿರುಸಾಲ ಯೋಜನೆಯ ಪ್ರಯೋಜನ ಪಡೆಯದೇ ಇರುವ ಸಂಘಗಳು ಮಾತ್ರ ಸಾಲ ಪಡೆಯಲು ಅರ್ಹರಾಗಿರುತ್ತಾರೆ.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು: ಸಾಲ ಪಡೆಯಲು ನಿಗಮಕ್ಕೆ ಸಲ್ಲಿಸಬೇಕಾದ ಸಾಲದ ಅರ್ಜಿ. ಗ್ರೇಡಿಂಗ್ ಮಾಡಿರುವ ದಾಖಲೆಗಳನ್ನು ಸಂಬAಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಢೀಕರಿಸಿ ನೀಡಬೇಕು. ಸಾಲ ತೆಗೆದುಕೊಳ್ಳಲು ಸದಸ್ಯರೆಲ್ಲರು ಮಾಡಿದ ನಿರ್ಣಯದ ಠರಾವು ಪ್ರತಿ. ಸದಸ್ಯರೆಲ್ಲರು ಸಹಿ ಮಾಡಿರುವ 50 ರೂ. ಛಾಪಾ ಕಾಗದ. ಒಕ್ಕೂಟದ ಸದಸ್ಯತ್ವ ಹಾಗೂ ಸಂಘದ ಉಳಿತಾಯ ಸಂಬAಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ದೃಡೀಕರಿಸಿ ನೀಡುವುದು. ಗುಂಪು ಬೇರೆ ಯಾವುದೇ ಆರ್ಥಿಕ ಸಂಸ್ಥೆ, ಬ್ಯಾಂಕ್‌ಗಳಲ್ಲಿ ಸಾಲಗಾರರಾಗಿರಬಾರದು, ಈ ಕುರಿತು ದಾಖಲೆ ಲಗತ್ತಿಸಬೇಕು.

ಬ್ಯಾಂಕ್ ಖಾತೆಯ ಪುಸ್ತಕದ ನಕಲು ಪ್ರತಿ ಮತ್ತು ಬ್ಯಾಂಕಿನ ಹೆಸರು ಮತ್ತು ಐ.ಎಫ್.ಎಸ್.ಸಿ ಕೋಡ್ ದಾಖಲೆ, ಸಾಲ ಪಡೆಯಲು ಬಯಸಿದ ಉತ್ಪಾದನಾ ಘಟಕದ ಯೋಜನಾ ವರದಿ ಅದರಲ್ಲಿ ಘಟಕದ ಸ್ಥಿರ ಮತ್ತು ಚರಾಸ್ತಿಯ ಸಂಪೂರ್ಣ ವಿವರ ಹಾಗೂ ಘಟಕದ ಉತ್ಪಾದನಾ ಸಾಮರ್ಥ್ಯದಿಂದ ಗುಂಪು ಮಾಸಿಕವಾಗಿ ಗಳಿಸುವ ನಿವ್ವಳ ಲಾಭದ ವಿವರ ಹೊಂದಿರಬೇಕು.

ಅರ್ಹ ಸ್ತಿçà ಶಕ್ತಿ ಸ್ವ ಸಹಾಯ ಸಂಘಗಳು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಅರ್ಜಿಗಳನ್ನು ಪಡೆದು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಭರ್ತಿ ಮಾಡಿದ ಅರ್ಜಿಗಳನ್ನು ಜ.31 ರೊಳಗಾಗಿ ಸಂಬAಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗೆ ಸಂಜೆ 5.30 ಗಂಟೆಯ ಒಳಗಾಗಿ ಸಲ್ಲಿಸಬೇಕು ಎಂದು ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply