This is the title of the web page
This is the title of the web page

Please assign a menu to the primary menu location under menu

Local News

ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಮೀಣ ಕುಶಲಕರ್ಮಿಗಳಿಂದ ಸಹಾಯಧನದ ಅರ್ಜಿ ಆಹ್ವಾನ


ಬೆಳಗಾವಿ,ಅ.೨೧: ೨೦೨೧-೨೨ ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಗ್ರಾಮೀಣ ಭಾಗದ ಕುಶಲಕರ್ಮಿಗಳಿಗೆ ತಮ್ಮ ವೃತ್ತಿಯನ್ನು ವೃದ್ಧಿಗೊಳಿಸಲು ಅನುಕೂಲವಾಗುವಂತೆ ಅಭ್ಯರ್ಥಿಗಳಿಗೆ ಶೇ. ೬೦ ರ ಸಹಾಯಧನದ ಅಡಿ ಸಾಲಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅಕ್ಟೊಬರ್ ೩೧ ರ ಒಳಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಹೊಂದಿರಬೇಕಾದ ಅರ್ಹತೆಗಳು :
ಅಭ್ಯರ್ಥಿಯು ಗ್ರಾಮೀಣ ಭಾಗದವರಿರಬೇಕು ಹಾಗೂ ಕುಶಲಕರ್ಮಿಯಾಗಿರಬೇಕು. ವಯಸ್ಸು ೧೮ ರಿಂದ ೪೫ ವರ್ಷಗಳು, ಅಭ್ಯರ್ಥಿಯು ಸಾಮಾನ್ಯ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಥವಾ ಯಾವುದೇ ಜಾತಿಗೆ ಸೇರಿರಬಹುದು. ಯೋಜನಾ ವೆಚ್ಚ ೩೦,೦೦೦ ರೂ. ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ೨೦,೦೦೦ ರೂ. ಸರ್ಕಾರದ ಸಹಾಯಧನ ಶೇ.೬೦% ರಂತೆ (ಗರಿಷ್ಠ ರೂ.೧೦,೦೦೦/-) ನೀಡಲಾಗುವುದು.
ಸಲ್ಲಿಸಬೇಕಾದ ದಾಖಲೆಗಳು :
ಆಧಾರಕಾರ್ಡ / ರಹವಾಸಿ ದಾಖಲೆ, ಗ್ರಾಮ ಸಭೆಯಆಯ್ಕೆ ಪ್ರಮಾಣ ಪತ್ರ. ಜಾತಿ ಪ್ರಮಾಣ ಪತ್ರ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಗಳಿಗೆ ಮಾತ್ರ). ಯೋಜನಾ ವರದಿ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೈಗಾರಿಕಾ ವಿಸ್ತರಣಾದಿಕಾರಗಳನ್ನು ಅಥವಾ ಉಪನಿರ್ದೇಶಕರು (ಗ್ರಾಕೈ) ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯತ ವಿಭಾಗ, ಬೆಳಗಾವಿ. ಇವರನ್ನು ಸಂಪರ್ಕಿಬಹುದು ಎಂದು ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply