This is the title of the web page
This is the title of the web page

Please assign a menu to the primary menu location under menu

State

ಕುಶಲಕರ್ಮಿಗಳಿಗೆ ಸಾಲ-ಸಹಾಯಧನ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಅಹ್ವಾನ


ಗದಗ ಫೆಬ್ರುವರಿ ೯: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ ಕುಶಲಕರ್ಮಿಗಳಿಗಾಗಿ ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ. ಈ ಯೋಜನೆಯಲ್ಲಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರ ಬ್ಯಾಂಕ್ ಮತ್ತು ಪ್ರಾದೇಶಿಕ ಬ್ಯಾಂಕಗಳಿಂದ ಪ್ರತಿ ಕುಶಲಕರ್ಮಿಗಳಿಗೆ ರೂ. ೫೦,೦೦೦/- ವರೆಗೆ ಸಾಲ- ಸಹಾಯಧನ ಸೌಲಭ್ಯ ನೀಡಲಾಗುತ್ತದೆ.
ಹೊಸದಾಗಿ ಸೇರ್ಪಡೆಯಾದ ಧೋಬಿ, ಕ್ಷೌರಿಕ, ಚರ್ಮಗಾರಿಕೆ ಹಾಗೂ ಬಡಗಿತನ ವೃತ್ತಿಯಲ್ಲಿ ನಿರತರಾದ ಜಿಲ್ಲೆಯ ಎಲ್ಲಾ ತಾಲೂಕುಗಳ ಕುಶಲಕರ್ಮಿಗಳು ಹಾಗೂ ರೋಣ, ಗಜೇಂದ್ರಗಡ ಮತ್ತು ನರಗುಂದ ತಾಲೂಕುಗಳ ಕುಶಲಕರ್ಮಿಗಳು ಮಾತ್ರ ಅನುಮತಿಸಲಾದ ಎಲ್ಲ ೨೬ ಚಟುವಟಿಕೆ/ವೃತ್ತಿಗಳಲ್ಲಿ ಈ ಮೊದಲು ಅರ್ಜಿ ಸಲ್ಲಿಸದೇ ಇರುವ ಆಸಕ್ತ ಕುಶಲಕರ್ಮಿಗಳು ಅರ್ಜಿ ನಮೂನೆಗಳನ್ನು ಆಯಾ ತಾಲ್ಲೂಕಿನ ಕೈಗಾರಿಕಾ ವಿಸ್ತರಣಾಧಿಕಾರಿ/ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ/ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಫೆಬ್ರುವರಿ ೧೭ ರೊಳಗಾಗಿ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ರೂಂ. ೨೨೧ ಜಿಲ್ಲಾ ಆಡಳಿತ ಭವನ ಗದಗ ಅಥವಾ ಉಪ ನಿರ್ದೇಶಕರು(ಗ್ರಾಕೈ), ಗ್ರಾಮೀಣ ಮತ್ತು ಸಣ್ಣ ಉದ್ಯಮ ವಿಭಾಗ, ಜಿಲ್ಲಾ ಪಂಚಾಯತ, ರೂಂ. ೧೦೯ ಜಿಲ್ಲಾ ಆಡಳಿತ ಭವನ ಗದಗ ಕಛೇರಿಗಳಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೦೮೩೭೨-೨೩೧೩೯೮, ೯೯೦೦೫೯೨೪೯೦, ೯೭೩೧೦೯೪೯೪೫, ೮೦೯೫೫೨೦೪೦೨ ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply