This is the title of the web page
This is the title of the web page

Please assign a menu to the primary menu location under menu

State

ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ


ಗದಗ ಮಾರ್ಚ ೨: ಜಿಲ್ಲೆಯ ೧೬ ಗ್ರಾಮ ಪಂಚಾಯತಗಳಾದ ಅಮರಗೋಳ, ಬೆನಕನಕೊಪ್ಪ , ಬಿಡನಾಳ, ಗೋವನಾಳ, ಗುಳಗುಳಿ, ಹೊಸಳ್ಳಿ , ಹುಲ್ಲೂರು , ಜಂತ್ಲಿ ಶಿರೂರು, ಕಳಸಾಪುರ, ಕೌಜಗೇರಿ, ಮಾಡಳ್ಳಿ, ಮಜ್ಜೂರು, ಮಾರನಬಸರಿ, ಮುರಡಿ, ಶಿವಾಜಿನಗರ, ತಿಮ್ಮಾಪುರಗಳಲ್ಲಿನ ಗ್ರಂಥಾಲಯಗಳಲ್ಲಿ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಗೌರವ ಸಂಬಾವನೆ ರೂ ೧೨,೦೦೦/- ಆಧಾರದ ಮೇಲೆ ಮೇಲ್ವಿಚಾರಕರನ್ನು ನೇಮಿಸಲಾಗುವುದು. ಸದರಿ ಹುದ್ದೆಯು ಗೌರವಧನದ ಹುದ್ದೆಯಾಗಿದ್ದು ಷರತ್ತಿಗೊಳಪಟ್ಟು ಆಯಾ ಗ್ರಾಮ ಪಂಚಾಯತ್ ಕೇಂದ್ರದಲ್ಲಿ ನಿಗದಿಪಡಿಸಿದ ಮೀಸಲಾತಿಗೆ ಅನುಗುಣವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿರಬೇಕು. ತಹಶೀಲ್ದಾರರವರಿಂದ ಪಡೆದ ರಹವಾಸಿ ಪ್ರಮಾಣ ಪತ್ರ ಲಗತ್ತಿಸಬೇಕು. ಅಭ್ಯರ್ಥಿಯು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಗ್ರಂಥಾಲಯ ವಿಜ್ಞಾನ ತರಬೇತಿ ಪ್ರಮಾಣ ಪತ್ರ ಪಡೆದಿರತಕ್ಕದ್ದು. ಹಾಗೂ ಕನಿಷ್ಟ ಮೂರು ತಿಂಗಳ ಕಂಪ್ಯೂಟರ್ ಕೋರ್ಸನಲ್ಲಿ ಉತ್ತೀರ್ಣರಾಗಿರಬೇಕು. ಅರ್ಜಿಸಲ್ಲಿಸಲು ಮಾರ್ಚ ೨೩ ಕೊನೆಯ ದಿನವಾಗಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ್ ನೋಟೀಸ್ ಬೋರ್ಡ ಅಥವಾ ಗದಗ ಜಿಲ್ಲಾ ಪಂಚಾಯತ್ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply