This is the title of the web page
This is the title of the web page

Please assign a menu to the primary menu location under menu

Local News

ಕಿವುಡು ಮಕ್ಕಳ ಶಾಲೆ: ಅಂಶಕಾಲಿಕ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ


ಬೆಳಗಾವಿ, ಮೇ.೨೩ : ಇಲ್ಲಿನ ಕಿವುಡ ಮಕ್ಕಳ ಸರಕಾರಿ ಶಾಲೆಗೆ ಪದವೀಧರ ಸಹಾಯಕ ಶಿಕ್ಷಕರನ್ನು ಅಂಶಕಾಲಿಕವಾಗಿ ಮಾಸಿಕ ಗೌರವಧನ ಗರಿಷ್ಟ ರೂ: ೬,೦೦೦/- (ಆರು ಸಾವಿರ ) ರಂತೆ ಭೋಧನೆ ಮಾಡಲು ಒಟ್ಟು ೩ (ಮೂರು) ಅಭ್ಯರ್ಥಿಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಶ್ರವಣ ದೋಷವುಳ್ಳ ಮಕ್ಕಳಿಗೆ ಪಾಠ ಮಾಡಲು ವಿಶೇಷ ಶಿಕ್ಷಣ/ತರಬೇತಿ ಹೊಂದಿರುವವರಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಆಸಕ್ತರು ಮೇ ೩೦, ೨೦೨೩ ರ ಒಳಗಾಗಿ “ಅಧೀಕ್ಷಕರು ಕಿವುಡ ಮಕ್ಕಳ ಸರಕಾರಿ ಶಾಲೆ ಅಜಮ ನಗರ, ವಿದ್ಯಾಗಿರಿ ಬೆಳಗಾವಿ-೫೯೦೦೧೦” ಇವರಿಗೆ ಅಗತ್ಯ ದೃಢೀಕೃತ ದಾಖಲಾತಿಗಳೊಂದಿಗೆ ಖುದ್ದಾಗಿ ಭೇಟಿ ನೀಡಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:-೯೯೦೧೦೭೩೬೮೬ ಅಥವಾ ೯೬೬೩೭೧೧೦೮೧ ಸಂಪರ್ಕಿಸಬಹುದಾಗಿದೆ ಎಂದು ಕಿವುಡ ಮಕ್ಕಳ ಸರಕಾರಿ ಶಾಲೆಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply