This is the title of the web page
This is the title of the web page

Please assign a menu to the primary menu location under menu

State

ಚುನಾವಣಾ ವೀಕ್ಷಕರುಗಳ ನಿಯೋಜನೆ


ಗದಗ ಎಪ್ರಿಲ್ ೨೦ : ಚುನಾವಣಾ ಆಯೋಗವು ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಕಾರ್ಯಗಳನ್ನು ವೀಕ್ಷಿಸಲು ಜಿಲ್ಲೆಯಲ್ಲಿ ಚುನಾವಣಾ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು, ಪೊಲೀಸ ವೀಕ್ಷಕರುಗಳನ್ನು ನಿಯೋಜನೆ ಮಾಡಿದೆ.
ಸಾಮಾನ್ಯ ವೀಕ್ಷಕರು : ಶಿರಹಟ್ಟಿ ಹಾಗೂ ಗದಗ ವಿಧಾನಸಭಾ ಕ್ಷೇತ್ರಗಳಿಗೆ ಅವಿನಾಶ ಚಂಪಾವತ್ (ಮೊ.ಸಂ. ೯೧೧೧೯೨೦೦೮ ) ಅವರನ್ನು ಹಾಗೂ ರೋಣ ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಗಳಿಗೆ ಸುಖ ಲಾಲ್ ಭರ್ತಿ ( ಮೊ.ಸಂ. ೯೪೧೫೧೯೨೦೦೨ ) ಅವರನ್ನು ಸಾಮಾನ್ಯ ವೀಕ್ಷಕರನ್ನಾಗಿ ನಿಯೋಜಿಸಿದೆ.
ವೆಚ್ಚ ವೀಕ್ಷಕರು : ಶಿರಹಟ್ಟಿ ಮತ್ತು ಗದಗ ವಿಧಾನಸಭಾ ಕ್ಷೇತ್ರಗಳಿಗೆ ಪಿ.ಎಂ. ಸೆಂತಿಲ್‌ಕುಮಾರ ( ಮೊ.ಸಂ. ೮೦೫೬೦೩೬೫೦೫ ) ಅವರನ್ನು ಹಾಗೂ ರೋಣ ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಗಳಿಗೆ ಸತ್ಯ ನಾರಾಯಣ ಚಿನಗಮ್ ( ಮೊ.ಸಂ. ೮೮೮೫೫೦೯೧೯೧ ) ಇವರುಗಳನ್ನು ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ನಿಯೋಜಿಸಿದೆ.
ಪೊಲೀಸ ವೀಕ್ಷಕರು : ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಶಿರಹಟ್ಟಿ, ಗದಗ, ರೋಣ ಮತ್ತು ನರಗುಂದ ಕ್ಷೇತ್ರಗಳಿಗೆ ಅರುಣ ಬಾಲಗೋಪಾಲನ್ ( ಮೊ.ಸಂ. ೯೪೯೮೧೧೧೧೦೭ ) ಅವರನ್ನು ಪೊಲೀಸ ವೀಕ್ಷಕರನ್ನಾಗಿ ನಿಯೋಜಿಸಿದೆ ಎಂದು ಪ್ರಕಟಣೆ ತಿಳಿಸಿದೆ.


Leave a Reply