This is the title of the web page
This is the title of the web page

Please assign a menu to the primary menu location under menu

Local News

ರಂಗಸಂಪದದ ಹೊಸ ಪದಾಧಿಕಾರಿಗಳ ನೇಮಕ


ಬೆಳಗಾವಿ ೧೫- ರಂಗಸಂಪದ (ರಿ) ಬೆಳಗಾವಿ ಸಂಸ್ಥೆ ೧೯೭೮ ರಿಂದ ಕಳೆದ ೪೪ ವರ್ಷದ ಅವಧಿಯಲ್ಲಿ ಬೆಳಗಾವಿಯಲ್ಲಿ ಮತ್ತು ಕರ್ನಾಟಕದಲ್ಲಿ ತನ್ನ ವಿವಿಧ ರಂಗಭೂಮಿ ಚಟುವಟಿಕೆಗಳ ಮೂಲಕ ಒಂದು ಅತ್ಯುತ್ತಮ ರಂಗಭೂಮಿ ಸಂಸ್ಥೆ ಎಂದು ಹೆಸರು ಗಳಿಸಿದೆ. ಕರ್ನಾಟಕ ಸರ್ಕಾರದ ರಾಜ್ಯ ನಾಟಕ ಅಕಾಡೆಮಿಯು ಇದನ್ನು ಗುರಿತಿಸಿ ೨೦೨೧ ರ ಅತ್ಯುತ್ತಮ ಹವ್ಯಾಸಿ ನಾಟಕ ಸಂಸ್ಥೆ ಎಂದು ಸನ್ಮಾನ ಮಾಡಿದೆ. ೨೦೧೬ ರಿಂದ ಇದ್ದ ರಂಗಸಂಪದ ಆಡಳಿತ ಮಂಡಳಿ ಹಲವಾರು ರಂಗಭೂಮಿ ಚಟುವಟಿಕೆಗಳನ್ನು ಬೆಳಗಾವಿ ಪ್ರೇಕ್ಷಕರಿಗೆ ನೀಡಿದೆ.
ಈಗ ರಂಗಸಂಪದ ಸಂಸ್ಥೆ ಮುಂದಿನ ೫ ವರ್ಷಗಳಿಗೆ ಹೊಸ ಆಡಳಿತ ಮಂಡಳಿ ರಚನೆ ಮಾಡಿದೆ. ರಂಗಸಂಪದ ಬೆಳಗಾವಿಯ ಪೋಷಕರಾದ ಎಸ್.ಎಮ್.ಕುಲಕರ್ಣಿ, ಡಾ. ಸರಜೂ ಕಾಟಕರ, ಎಮ್. ಕೆ. ಜೈನಾಪೂರ, ಶ್ರೀಪತಿ ಮಂಜನಬೈಲು ಇವರು ಇತ್ತೀಚೆಗೆ ಸಭೆ ಸೇರಿ ೨೦೨೨ರಿಂದ ೨೦೨೭ರ ೫ ವರ್ಷದ ಅವಧಿಗೆ ಈ ಕೆಳಕಂಡಂತೆ ಪೋಷಕರು, ಪದಾಧಿಕಾರಿಗಳು ಮತ್ತು ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದೆ..
ಪೋಷಕರು ಎಸ್.ಎಮ್.ಕುಲಕರ್ಣಿ, ಎಮ್ ಕೆ ಜೈನಾಪೂರ, ಡಾ. ಸರಜೂ ಕಾಟಕರ, ಸುಧೀರ ಸಾಲಿಯಾನ. ಮಧ್ವಾಚಾರ್ಯ ಆಯಿ, ಧ್ಧಾರೂಡ ಸಂಗೊಳ್ಳಿ, ಡಾ. ಎಮ್. ಎಲ್. ತುಕ್ಕಾರ, ಶ್ರೀಪತಿ ಮಂಜನಬೈಲು (ಪೋಷಕರು / ಗೌರವಾದ್ಯಕ್ಷರು) ಡಾ.ಅರವಿಂದ ಕುಲಕರ್ಣಿ (ಅಧ್ಯಕ್ಷರು), ರಾಮಚಂದ್ರ ಕಟ್ಟಿ (ಉಪಾಧ್ಯಕ್ಷರು), ಗುರುನಾಥ ಕುಲಕರ್ಣಿ (ಉಪಾಧ್ಯಕ್ಷರು), ಪ್ರಸಾದ್ ಕಾರಜೋಳ (ಕಾರ್ಯದರ್ಶಿ), ಯೋಗೇಶ ದೇಶಪಾಂಡೆ (ಸಹಕಾರ್ಯದರ್ಶಿ), ದಿಲೀಪ್ ಮಳಗಿ (ಖಜಾಂಚಿ) ಆಡಳಿತ ಮಂಡಳಿ ಸದಸ್ಯರಾಗಿ ಶ್ರೀಮತಿ. ಪದ್ಮಾ ಕುಲಕರ್ಣಿ, ಶ್ರೀಮತಿ ವೀಣಾ ಹೆಗಡೆ, ಅಶೋಕ ಕುಲಕರ್ಣಿ, ಬಸವರಾಜ ಹುಣಶೀಕಟ್ಟಿ, ಚಿದಾನಂದ ವಾಳಕೆ, ಪ್ರಲ್ಹಾದ ರಾಜಪುರೋಹಿತ.
ಪುನಃರಚಿತ ರಂಗಸಂಪದ ಬೆಳಗಾವಿ ಸಂಸ್ಥೆಯ ಎಲ್ಲಾ ಸದಸ್ಯರೂ ಇನ್ನೂ ಹೆಚ್ಚಿನ ಉತ್ಸಾಹದಿಂದ ರಂಗಭೂಮಿ ಚಟುವಟಿಕೆಗಳನ್ನು ಮಾಡಲಿ ಎಂದು ಸಭಾಧ್ಯಕ್ಷರಾಗಿದ್ದ ಎಸ್. ಎಮ್. ಕುಲಕರ್ಣಿಯವರು ಈ ಸಂದರ್ಭದಲ್ಲಿ ತಿಳಿಸಿದರು.


Gadi Kannadiga

Leave a Reply