This is the title of the web page
This is the title of the web page

Please assign a menu to the primary menu location under menu

Local News

ಮಕ್ಕಳ ಕಲಿಕೆಯತ್ತ ಗಮನ : ಶಿಕ್ಷಕರ ಕಾರ್ಯ ಶ್ಲಾಘ£Ãಯ


ಯಮಕನಮರಡಿ: ಮಕ್ಕಳಿಗೆ ಉತ್ತಮ ಗುಣಾತ್ಮಕ ಶಿಕ್ಷಣ ಕಲಿಸುವಲ್ಲಿ ಹುಕ್ಕೇರಿ ತಾಲೂಕಿನ ಎಲ್ಲ ಶಿಕ್ಷಕರ ಪಾತ್ರವು ಹಿರಿಯದಾಗಿದೆ ಎಂದು ಶಿಕ್ಷಣ ಪ್ರೇಮಿ, ಹಿಡಕಲ್ ಡ್ಯಾಂ ಸರ್ಕಾರಿ ಉರ್ದು ಪ್ರೌಢಶಾಲೆಯ ಕಾರ್ಯಾಧ್ಯಕ್ಷ ಎಮ್.ಕೆ. (ಸಲೀಂ) ಮುಲ್ಲಾ ಹೇಳಿದರು.
ಅವರು ಬುಧವಾರ ದಿ. ೨೩ ರಂದು ಹಿಡಕಲ್ ಡ್ಯಾಮಿನ ಸರ್ಕಾರಿಹಿರಿಯ ಉರ್ದು ಪ್ರಾಥಮಿಕ ಶಾಲೆಯ ಏಳನೇಯ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುವ ಮತ್ತು ಇತ್ತೀಚೆಗೆ ರಾಜ್ಯಮಟ್ಟದ ಶಿಕ್ಷಣರತ್ನ ಪ್ರಶಸ್ತಿ ಪಡೆದ ಶಿಕ್ಷಕ ಎನ್.ಎಮ್. ದುರದುಂಡಿ, ಇವರಿಗೆ ಸತ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ಶಾಲೆಗಳ ಸುಧಾರಣೆ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕಾದರೆ ಪಾಲಕರ ಹಾಗೂ ಗ್ರಾಮಸ್ಥರ ಸಹಾಯ ಸಹಕಾರ ಅಗತ್ಯ ಎಂದು ಎಮ್.ಕೆ. (ಸಲೀಂ) ಮುಲ್ಲಾ ಹೇಳಿದರು.
ಸಾಹಿತಿಗಳಾದ ಬಿ.ಎಸ್.ಮಾನೆ ಮಾತನಾಡಿ ವಿದ್ಯಾರ್ಥಿಗಳು ಸಮಯ ಪರಿಪಾಲನೆ ಏಕಾಗ್ರತೆಯಿಂದ ಅಧ್ಯಯನ ಮಾಡಿ ಒಳ್ಳೆಯ ಶಿಕ್ಷಣ ಪಡೆಯಬೇಕು. ಇಂದು ಮೊಬೈಲಗಳ ಬಳಕೆ ಮತ್ತು ಮೂಡನಂಬಿಕೆಗಳಲ್ಲಿ ವಿಶ್ವಾಸವಿಟ್ಟು ದೇವರಿಗಾಗಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಹುಕ್ಕೇರಿ ತಾಲೂಕಾಧ್ಯಕ್ಷ ಎನ್.ಎಸ್. ದೇವರಮ£, ಉಪಾಧ್ಯಕ್ಷ ಎಚ್.ಎಲ್. ಪೂಜೇರಿ, ಸಿಆರ್‌ಪಿಗಳಾದ ಆರ್.ಎ. ಮಿತ್ರನ್ನವರ, ಎಸ್.ಎಸ್.ಕಾಲೆಖಾಜಿ, ಮುಖ್ಯ ಶಿಕ್ಷಕರಾದ ಎಸ್.ಎ. ಸರಿಕರ, ಶ್ರೀಮತಿ ಟಿ.ಎಸ್. ತಲ್ಲೂರ, ಇವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಎಸ್.ಎಸ್.ಗಡಂಪಲ್ಲಿ, ಗ್ರಾ.ಪಂ. ಸದಸ್ಯರಾದ ಇರ್ಷಾದ ಕಿಲ್ಲೆದಾರ, ಗ್ರಾಮೀಣ ಶಿಕ್ಷಕರ ಸಂಘ ಚಿಕ್ಕೋಡಿ ಜಿಲ್ಲಾಧ್ಯಕ್ಷ ಎಸ್.ಬಿ. ಶಿಂಗೆ, ಎಸ್.ಡಿ.ಎಮ್.ಸಿ. ಅಧ್ಯಕ್ಷ ಅಬ್ದುಲ ನಧಾಪ, ಉಪಾಧ್ಯಕ್ಷೆ ರೇಶ್ಮಾ ಮುಲ್ತಾ£, ಚಾಂದ ಗುಂಡೆಗಾರ, ಅಹ್ಮದ ನಧಾಪ, ಶರೀಪ ಸಾಬ , ಮೆಹಬೂಬ ಪಠಾಣ, ಕರ್ನಾಟಕ ರಾಜ್ಯ ನೌಕರರ ಸಂಘ ಹಿಡಕಲ್ ಡ್ಯಾಂ ಶಾಖೆ ಮಾಜಿ ಅಧ್ಯಕ್ಷ ಎಮ್.ಟಿ. ಮುಲ್ಲಾರ, ಶಿಕ್ಷಕರಾದ ತಾಹೇರಾ ಅತ್ತಾರ, ಶ್ರೀಮತಿ ಎ.ಎ. ಪಠಾಣ, ಬಿ.ವಾಯ್. ಹೊಸಮ£, ಎಸ್.ಬಿ. ಕಲ್ಯಾಣಿ, ಡಿ.ಎಮ್. ಮಗದುಮ್ಮ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮಗಳು ಜರುಗಿದವು. ಆರಂಭದಲ್ಲಿ ವಿದ್ಯಾರ್ಥಿ ಬೀಬಿ ಪಾತೀಮಾ ಕುರಾಣ ಪಠಣ ಮಾಡಿದರು.


Gadi Kannadiga

Leave a Reply