This is the title of the web page
This is the title of the web page

Please assign a menu to the primary menu location under menu

State

ಅಪ್ಪು ಒಬ್ಬ ಅಪರೂಪದ ನಟ, ಸಮಾಜ ಸೇವಕ – ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್


ಬೆಳಗಾವಿ : ದಿವಂಗತ ಪುನೀತ್ ರಾಜಕುಮಾರ್ ಅವರು ಒಬ್ಬ ಅಪರೂಪದ ನಟ ಮತ್ತು ಅಪರೂಪದ
ಸಮಾಜ ಸೇವಕ ಎಂದು ಬೆಳಕಾವಿ ಗ್ರಾಮೀಣ ಶಾಸಕ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು
ಹೇಳಿದರು.
ಅವರು ಅಪ್ಪು ಜನ್ಮದಿನೋತ್ಸವ ಸಮಾರಂಭದಲ್ಲಿ ಪರ್ಯಾಯ ಕನ್ನಡ ಚಲನಚಿತ್ರದ ಫಸ್ಟ್ ಲುಕ್
ಪೋಸ್ಟರ್ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಗರದ ಸಿ.ಪಿ.ಇ.ಡಿ ಗ್ರೌಂಡ್ ನಲ್ಲಿ ಅಪ್ಪು ಅಭಿಮಾನಿ ಬಳಗ ಅಯೋಜಿಸಿದ್ದ ಅಪ್ಪು
ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಚಾಲನೆ ಮಾಡಲಾಯಿತು. ಇದೇ
ಸಂದರ್ಭದಲ್ಲಿ ಪರ್ಯಾಯ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬೆಳಗಾವಿ ಗ್ರಾಮೀಣ
ಕ್ಷೇತ್ರದ ವಿಧಾನಸಭಾ ಸದಸ್ಯೆ ಲಕ್ಷ್ಮಿ ಹೆಬ್ಬಾಳಕರ್ ಬಿಡುಗಡೆಗೊಳಿಸಿ ಮಾತನಾಡಿದ
ಅವರು
ಪುನಿತ್ ರಾಜಕುಮಾರ್ ಅವರ ಸರಳತೆ ಅದರ್ಶ ಹಾಗು ಅವರ ಕುಟುಂಬದೊಂದಿಗೆ ಇದ್ದ ಬಾಂದವ್ಯದ
ಕುರಿತು ಮಾಹಿತಿ ನೀಡಿದರು. ಪರ್ಯಾಯ ಚಿತ್ರ ತಂಡಕ್ಕೆ ಶುಭ ಹಾರೈಸಿದ ಅವರು ಈ
ಚಿತ್ರವು ಉತ್ತಮ ಸಂದೇಶದೊಂದಿಗೆ ಮೂಡಿಬರಲಿ ಎಂದರು.
ಕಾರ್ಯಕ್ರಮದ ಸಾನಿದ್ಯ ವಹಿಸಿದ್ದ ಶ್ರೀ ಶಂಕರಲಿಂಗ ಗುರುಪೀಠದ ಶ್ರೀ ಸೋಮಲಿಂಗ
ಮಹಾಸ್ವಾಮಿಗಳು ಮಾತನಾಡಿ ಪುನಿತ್ ರಾಜಕುಮಾರ್ ಅವರ ಪರೋಪಕಾರ ಗುಣ ಅನುಕರಣೀಯ ಎಂದರು,
ನಾವು ಮಾಡುವ ಕಾಯಕವನ್ನು ಶ್ರದ್ಧೆಯಿಂದ ಮಾಡಬೇಕು ಎಂದ ಅವರು ಯುವಜನರು ಉತ್ತಮ
ಅಚಾರವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕೆಂದರು. ಪರ್ಯಾಯ ಚಲನಚಿತ್ರ ಸದಭಿರುಚಿಯ
ಚಿತ್ರವಾಗಿ ಜನಮನ್ನಣೆ ಗಳಿಸಲಿ ಎಂದರು.
ಚಲನಚಿತ್ರ ನಿರ್ದೇಶಕ ರಮಾನಂದ ಮಿತ್ರ, ಮಮತ ಕ್ರಿಯೇಷನ್ ನ ರಾಜಕುಮಾರ್ ಮತ್ತು
ಮುರುಗೇಶ್ ಶಿವಪೂಜಿ ಚಿತ್ರೀಕರಣ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.
ಸ್ಥಳೀಯ ಕಲಾವಿದರಾದ ಶ್ರೀಮತಿ ಶಾಂತ ಆಚಾರ್ಯ, ಶ್ರೀ ವಿಶ್ವನಾಥ ದೇಸಾಯಿ ಮತ್ತು ಅವರ
ತಂಡದವರು ಮತ್ತಿತರ ಪುನೀತ್ ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರ ಚಲನಚಿತ್ರಗಳ
ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನರಂಜಿಸಿದರು. ಕಾರ್ಯಕ್ರಮದಲ್ಲಿ ರಂಜನ್ ರಾಜ್,
ಶಿವಾನಂದ್ ಚಿಕ್ಕಮಠ , ಮತ್ತಿತರರು ಉಪಸ್ಥಿತರಿದ್ದರು. ಶ್ರೀಮತಿ ಸುನಿತಾ ದೇಸಾಯಿ
ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.


Leave a Reply