This is the title of the web page
This is the title of the web page

Please assign a menu to the primary menu location under menu

State

ಬೈಕ್ ಕಳ್ಳರ ಬಂಧನ : ೫ಲಕ್ಷ ೧೦ ಸಾವಿರ ರೂ, ಮೌಲ್ಯದ ೯ ಬೈಕ್ ಪೊಲೀಸರ ವಶ


ಮೂಡಲಗಿ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳ ಬಸ್ ನಿಲ್ದಾಣದಲ್ಲಿ ಹಾಗೂ ರಸ್ತೆಗಳ ಪಕ್ಕದಲ್ಲಿ ನಿಲ್ಲಸಿದ ಬೈಕಗಳನ್ನು ಕಳ್ಳತನ ಮಾಡ್ತಿದ್ದ ಆರೋಪಿಗಳನ್ನು ಮೂಡಲಗಿ ಪೊಲೀಸರು ಸೋಮವಾರದಂದು ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.
ಜುಲೈ ೧೧ರಂದು ಬೆಳಗ್ಗೆ ಪಟ್ಟಣದ ಗೋಕಾಕ ಕ್ರಾಸ್ ಬಳಿ ಬೈಕ್ ತಪಾಸಣೆ ವೇಳೆಯಲ್ಲಿ ನಂಬರ ಪ್ಲೇಟ್ ಇಲ್ಲದ ಒಂದೇ ಬೈಕ್ ಮೇಲೆ ಮೂರು ಜನರ ಬಂದಿದ್ದು, ಅವರಿಗೆ ಬೈಕ್ ನಿಲ್ಲಿಸುವಂತೆ ಪೊಲೀಸ್ ಸಿಬ್ಬಂದಿಗಳು ಹೇಳಿದರು ಬೈಕ್ ನಿಲ್ಲಿಸದೇ ಹಾಗೆ ಬೈಕನ್ನು ಚಲಾಯಿಸುತ್ತಿದ್ದು, ಅವರನ್ನು ಪೊಲೀಸ್ ಸಿಬ್ಬಂದಿಗಳು ಹಿಂಬಾಲಿಸಿ ಬೈಕನ್ನು ಹಿಡಿದು ವಿಚಾರಣೆ ಮಾಡಿದ ವೇಳೆ ಮೂಡಲಗಿ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ ೮೯/೨೦೨೨ ಕಲಂ.೩೭೯ ಐಪಿಸಿ ರಲ್ಲಿ ಕಳುವಾಗಿ ಹೋದ ಬೈಕ್ ಎಂದು ಪತ್ತೆಯಾದ ಹಿನ್ನೆಲೆ ಹೆಚ್ಚಿನ ವಿಚಾರಣೆ ಕೈಗೊಂಡ ಸಂದರ್ಭದಲ್ಲಿ ೬ ತಿಂಗಳಿAದ ಸುಮಾರು ೯ ಬೈಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಆರೋಪಿಗಳಾದ ಪಟ್ಟಣದ ಗವಿ ತೋಟದ ಆನಂದ ಶರತ್ ಚೌಗಲಾ (೨೫), ಕಲ್ಲಪ್ಪ ಮಲ್ಲಿಕಾರ್ಜನ ಬಿಸನಕೊಪ್ಪ (೨೭), ಬಸವರಾಜ ಶ್ರೀಕಾಂತ ನಿಡಗುಂದಿ (೨೬) ಎಂಬ ಆರೋಪಿಗಳು ಪಟ್ಟಣದಲ್ಲಿ ಒಂದು ಬೈಕ್, ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಒಂದು, ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಒಂದು, ಪಾಲಬಾಂವಿ ಗ್ರಾಮದಲ್ಲಿ ಒಂದು, ಮುಧೋಳ ತಾಲೂಕಿನ ಮಹಾಲಿಂಗಪೂರ ಪಟ್ಟಣದಲ್ಲಿ ನಾಲ್ಕು, ಸೈದಾಪೂರ ಗ್ರಾಮದಲ್ಲಿ ಒಂದು ಬೈಕ್‌ಗಳನ್ನು ಕಳ್ಳತನ ಮಾಡಿ, ಅದರಲ್ಲಿ ರಾಯಬಾಗ ತಾಲೂಕಿನ ಇಟನ್ಯಾಳ ಗ್ರಾಮದ ವ್ಯಕ್ತಿ ಓರ್ವನಲ್ಲಿ ಎರಡು ಬೈಕ್‌ಗಳನ್ನು ಅಡವಿಟ್ಟರುವ ಬೈಕ್‌ಗಳನ್ನು ಮೂಡಲಗಿ ಪೊಲೀಸರು ವಶಪಡೆಕೊಂಡಿದ್ದಾರೆ.
ಬೆಳಗಾವಿ ಎಸ್‌ಪಿ, ಹೆಚ್ಚುವರಿ ಎಸ್‌ಪಿ ಮತ್ತು ಡಿಎಸ್‌ಪಿ ಹಾಗೂ ಪ್ರಬಾರಿ ಸಿಪಿಐ ಮಾರ್ಗದರ್ಶನದಂತೆ ಪಿಎಸ್‌ಐ ಎಚ್ ವೈ ಬಾಲದಂಡಿ ನೇತೃತ್ವದ ಆರ್ ಎಸ್ ಪೂಜೇರಿ, ಎಸ್ ಜಿ ಮನ್ನಾಪೂರ ಅವರ ತಂಡ ರಚಿಸಿ, ಸುಮಾರು ೫ ಲಕ್ಷ ೧೦ ಸಾವಿರ ರೂ, ಮೌಲ್ಯದ ೯ ಬೈಕಗಳನ್ನು ವಶಪಡೆಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ ಎಂದು ಪಿಎಸ್‌ಐ ಎಚ್ ವೈ ಬಾಲದಂಡಿ ತಿಳಿಸಿದ್ದಾರೆ.


Gadi Kannadiga

Leave a Reply