This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಅರಣ್ಯ ಸಂಚಾರಿದಳದಿಂದ ಕೃಷ್ಣ ಮೃಗ ಚರ್ಮ ಮಾರಾಟಗಾರರ ಬಂಧನ


ಬೆಳಗಾವಿ :ಬೆಳಗಾವಿ ಅರಣ್ಯ ಸಂಚಾರಿ ದಳದ ತಂಡ ಕೃಷ್ಣ ಮೃಗ ಚರ್ಮ ಮಾರಾಟ ಮಾಡುವ ಬೃಹತ್ ಜಾಲವನ್ನು ಬೇಧಿಸಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಜ್ಜರಿ , ದೇವರಗುಡ್ಡ , ರಾಣೇಬೆನ್ನೂರಿನ ಮೂವರು ವ್ಯಕ್ತಿಗಳನ್ನು ಮತ್ತು ಬ್ಯಾಡಗಿ ತಾಲ್ಲೂಕಿನ ಬುಡಪ್ಪನಹಳ್ಳಿ ಗ್ರಾಮದ ಒಬ್ಬ ವ್ಯಕ್ತಿ ಮತ್ತು ಹಾವೇರಿ ತಾಲ್ಲೂಕಿನ ಬರಡಿ ಗ್ರಾಮದ ವ್ಯಕ್ತಿ ಸೇರಿ ಒಟ್ಟು 5 ಜನರನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತರಿಂದ 3 ಕೃಷ್ಣ ಮೃಗದ ಚರ್ಮಗಳನ್ನು , ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಬಳಸುವ 04 ತಂತಿಯ ಉರುಳುಗಳನ್ನು ಮತ್ತು 01 ದ್ವಿಚಕ್ರ ವಾಹನ ಸಮೇತ ರಾಣೇಬೆನ್ನೂರಲ್ಲಿ ವಶಪಡಿಸಿಕೊಳ್ಳಲಾಗಿದೆ.

ಬಂಧಿತರು ಕೃಷ್ಣ ಮೃಗ ಚರ್ಮಗಳನ್ನು 15 ಲಕ್ಷ ಹಣದ ವ್ಯವಹಾರ ಮಾಡುವ ಸಮಯದಲ್ಲಿ , ಜಾಗೃತ ದಳದ ಮುಖ್ಯಸ್ಥರಾದ ಶ್ರೀಮತಿ ಸೀಮಾ ಗರ್ಗ್ ( ಭಾಅಸೇ ) , ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ( ಜಾಗೃತ ) , ಬೆಂಗಳೂರು ಹಾಗೂ ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚೌವ್ಹಾನ ಹಾಗೂ ಶಂಕರ ಕೆ . ಕಲ್ಲೋಳಿಕರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು , ಅರಣ್ಯ ಸಂಚಾರಿದಳ ( ಜಾ ) , ಬೆಳಗಾವಿ ರವರ ನಿರ್ದೇಶನದಂತೆ ಬೆಳಗಾವಿಯ ಜಾಗೃತ ದಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ ಬಿ. ತೇಲಿ ಮತ್ತು ವಿ.ಡಿ . ಹುದ್ದಾರ ಅವರ ನೇತೃತ್ವದಲ್ಲಿ ಹಾವೇರಿ ಜಿಲ್ಲೆ ರಾಣೇಬೆನ್ನೂರು ಪಟ್ಟಣದಲ್ಲಿ 03 ಕೃಷ್ಣ ಮೃಗ ಚರ್ಮ, ಬೇಟೆಯಾಡಲು ಬಳಸುವ 04 ತಂತಿಯ ಉರುಳುಗಳನ್ನು , 01 ದ್ವಿಚಕ್ರವಾಹನವನ್ನು ಜಫ್ತು ಪಡಿಸಿಕೊಂಡಿದ್ದು , ಒಟ್ಟು 05 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Gadi Kannadiga

Leave a Reply