ಬೆಳಗಾವಿ: ಶಾಂತಲಾ ನಾಟ್ಯಾಲಯ ಇನ್ಸಿ÷್ಟಟ್ಯೂಟ್ ವತಿಯಿಂದ ಭಾರತ ಸರಕಾ??ರದ ಸಂಸ್ಕöÈತಿ ಇಲಾಖೆ ಸಹಯೋಗದಲ್ಲಿ ಇಲ್ಲಿನ ಟಿಳಕ ಚೌಕ್ ಬಳಿಯ ಲೋಕಮಾನ್ಯ ರಂಗಮಂದಿರದಲ್ಲಿ ಕಿಕ್ಕಿರಿದ ಪ್ರೇಕ್ಷಕರ ಉಪಸ್ಥಿತಿಯಲ್ಲಿ ‘ನೃತ್ಯೋಲ್ಲಾಸ’ ಕಾರ್ಯಕ್ರಮ ಭಾನುವಾರ ಸಂಜೆ ನಡೆಯಿತು.
ಶಾಂತಲಾ ನಾಟ್ಯಾಲಯದ ಗುರು ವಿದೂಷಿ ರೇಖಾ ಹೆಗಡೆ ಅವರ ನಿರ್ದೇಶನದಲ್ಲಿ ನಾಟ್ಯಾಲಯದ ವಿದ್ಯಾರ್ತಿಗಳು ವೈವಿದ್ಯಮಯ ನೃತ್ಯಗಳನ್ನು ಪ್ರದರ್ಶಿಸಿದರು. ವಿದುಷಿ ಅನುಶ್ರೀ ಖಡಬಡಿ ಹಾಗೂ ವಿದ್ವತ್ ತಂಡದ ಗಣೇಶ ಸ್ತುತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.
ಸಬ್ ಜೂನಿಯರ್ ತಂಡದ ಶ್ಲೋಕ ಮತ್ತು ರೋಹಿತ್ ಹಾಗೂ ವಿದ್ವತ್ ತಂಡದ ಸಂಪೂರ್ಣ ರಾಮಾಯಣ ಪ್ರೇಕ್ಷಕರಿಂದ ಭಾರೀ ಕರತಾಡನ ಪಡೆಯಿತು. ಮಾ. ನಿನಾದ್ ಅಶೋಕ್ ಹಾಗೂ ಕಿರಿಯರ ತಂಡದ ವಚನ, ವಿದುಷಿ ರೇಖಾ ಅಶೋಕ ಹೆಗಡೆ ಅವರ ದೇವರ ನಾಮ, ಮಾ. ಋತ್ವಿಕ್ ಅಶೋಕ ಹಾಗೂ ಹಿರಿಯರ ತಂಡದ ಪದಂ, ಸಮೀಕ್ಷಾ ಆರ್. ಕಾರಂತ ಹಾಗೂ ಹಿರಿಯರ ತಂಡದ ಏಕತೆ ಮತ್ತು ವೈವಿದ್ಯತೆ ಪ್ರಾಕಾರಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ಕಲಾವಿದರ ಬೀಡಾಗಿದ್ದು, ಇಲ್ಲಿನ ಕಲೆಗಳು ಅತ್ಯಂತ ಸಮೃದ್ಧತೆಯಿಂದ ಕೂಡಿದೆ. ಕಲೆಯನ್ನು ನಾನು ಆಸ್ವಾದಿಸಬಹುದೇ ವಿನಃ ಅವುಗಳನ್ನು ವರ್ಣಿಸುವಷ್ಟು ಶಕ್ತಿ ನಮಗಿಲ್ಲ. ಶಾಂತಲಾ ನಾಟ್ಯಾಲಯ ಕಳೆದ ೩೫ ವರ್ಷದಲ್ಲಿ ಸಾವಿರಾರು ಮಕ್ಕಳನ್ನು ಬೆಳಕಿಗೆ ತರುವ ಮೂಲಕ ನಿಜವಾದ ಕಲಾಸೇವಗೈಯ್ಯುತ್ತಿದೆ. ಅವರ ಸೇವೆಯನ್ನು ಗಮನಿಸಿದರೆ ಸರಕಾರ ನೀಡುವ ಅನುದಾನ ಅತ್ಯಲ್ಪವಾಗಿದೆ. ಇಂತಹ ಸಂಸ್ಥೆ ನಮ್ಮ ಜಿಲ್ಲೆಯಲ್ಲಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಕಳೆದ ೨೫ ವರ್ಷದಿಂದ ಹುಬ್ಬಳ್ಳಿ ಮತ್ತು ಶಿರಸಿಯಲ್ಲಿ ನಾಟ್ಯ ಸೇವೆಯಲ್ಲಿ ನಿರತವಾಗಿರುವ ನಾಟ್ಯಾಂಜಲಿ ನೃತ್ಯಕಲಾ ಕೇಂದ್ರದ ನಿರ್ದೇಶಕಿ ಡಾ.ಸಹನಾ ಭಟ್? ಕಾರ್ಯಕ್ರಮ ಉದ್ಘಾಟಿಸಿ?, ಒಂದು ನಾಟ್ಯ ಶಾಲೆಯನ್ನು ನಡೆಸುವಾಗ ಅದರ ಹಿಂದಿನ ಶ್ರಮವೇನು ಎನ್ನುವ ಅರಿವು ನನಗಿದೆ. ವಿದೂಷಿ ರೇಖಾ ಭಟ್ ಅವರು ಕಳೆದ ೩೫ ವರ್ಷಗಳಿಂದ ತಪಸ್ಸಿನ ರೀತಿಯಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅವರ ಕಲಾ ಸೇವೆಯನ್ನು ಬಹಳ ಹತ್ತಿರದಿಂದ ನಾನು ನೋಡುತ್ತ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಸಾವಿರಾರು ಮಕ್ಕಳನ್ನು ಬೆಳೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹಾರೈಸಿದರು.
?ಗೌರವ ಅತಿಥಿಯಾಗಿ ಆಗಮಿಸಿದ್ದ ?ಹಿರಿಯ ಪತ್ರಕರ್ತ, ಪ್ರಗತಿವಾಹಿನಿ ಮುಖ್ಯ ಸಂಪಾದಕ ಎಂ.ಕೆ. ಹೆಗಡೆ??, ಶ್ರೀಮತಿ ಹೆಗಡೆ? ಹಾಗೂ? ವಿದೂಷಿ ರೇಖಾ ಹೆಗಡೆ ಹಾಗೂ ಅವರ ತಂಡದವರು, ಮಕ್ಕಳ ಸಂಖ್ಯೆ, ಅದರಿಂದ ಬರುವ ಆದಾಯ ಯಾವುದನ್ನೂ ಯೋಚಿಸದೆ ದೇವರ ಕೆಲಸ ಎನ್ನುವ ರೀತಿಯಲ್ಲಿ ನಿಷ್ಠೆಯಿಂದ ನಾಟ್ಯಾಲಯವನ್ನು ನಡೆಸುತ್ತ ಬಂದಿದ್ದಾರೆ. ಸಹಸ್ರಾರು ಮಕ್ಕಳ ಪ್ರತಿಭೆಯನ್ನು ಹೊರಜಗತ್ತಿಗೆ ಪರಿಚಯಿಸಿದ್ದಾರೆ. ೩೫ ವರ್ಷಗಳಿಂದ ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವ ಈ ನಾಟ್ಯ ಶಾಲೆಗೆ ಸರಕಾರದಿಂದ ಸೂಕ್ತ ರೀತಿಯಲ್ಲಿ ಪ್ರೋತ್ಸಾಹ ಸಿಗದಿರುವುದು ಬೇಸರದ ಸಂಗತಿ. ಈ ವರ್ಷವಾದರೂ ಇಂತಹ ಸಂಸ್ಥೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಸರಕಾರ ತನ್ನ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪಂಡಿತ ರವೀಂದ್ರ ಶರ್ಮಾ, ಪ್ರದೀಪ ಭಟ್, ಶ್ರೀಮತಿ ಹೆಗಡೆ, ರತ್ನಮ್ಮ ವೇದಿಕೆಯಲ್ಲಿದ್ದರು. ಸುಬ್ರಹ್ಮಣ್ಯ ಭಟ್ ಮತ್ತು ಆರ್ಯ ಭಂಡಾರಕರ ಅತ್ಯಂತ ಮನೋಜ್ಞವಾಗಿ ಕಾರ್ಯಕ್ರಮ ನಿರೂಪಿಸಿದರು.