ಬೆಳಗಾವಿ -೨೭- ಚಿತ್ರಕಲೆಗಾಗಿ ದುಡಿದ ಹಿರಿಯ ಮಹಿನಿಯರನ್ನು ಮರೆಯಬಾರದು ಅವರು ಕಲೆಗಾಗಿ ಕೊಟ್ಟ ಕೊಡುಗೆಗಳನ್ನು ನೆನಪಿಸಿಕೊಳ್ಳಬೇಕು ಅದರಂತೆ ಹಿರಿಯ ಕಲಾವಿದರಾದವರು ಕಿರಿಯರಲ್ಲಿರುವ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಚಿತ್ರಕಲೆಯನ್ನು ಪೋಷಿsಸಬೇಕು, ಕಲಾವಿದರನ್ನು ಗೌರವಿಸಬೇಕು ಎಂದು ಹಿರಿಯ ಕಲಾವಿದರಾದ ಮಹಾವೀರ ಬಾಳಿಕಾಯ ಅವರು ಇಂದಿಲ್ಲಿ ಹೇಳಿದರು.
ಕೆ. ವೆಂಕಟಪ್ಪ ಪ್ರಶಸ್ತಿ ವಿಜೇತ ದಿ. ಬಿ. ಕೆ. ಹುಬ್ಲಿಯವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಇದೇ ದಿ. ೨೬ ಶನಿವಾರದಂದು ದಿ. ಹಿಂದ ಸೊಶಿಯಲ್ ಆಂಡ್ ಸ್ಫೋರ್ಟ್ಸ ಕ್ಲಬ್ ಹೊರ ಆವರಣ ವೇದಿಕೆಯಲ್ಲಿ ಬಿ. ಕೆ. ಹುಬ್ಳಿ ಕಲೆ ಮತ್ತು ಸಂಸ್ಕೃತಿ ಸಂಘಟನೆಯವರು ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ದಿ. ಬಿ. ಕೆ. ಹುಬ್ಳಿ ಶತಮಾನೋತ್ಸವ ಪ್ರಶಸಿಯನ್ನು ಸ್ವೀಕರಿಸಿದ ಹಿರಿಯ ಕಲಾವಿದ ಮಹಾವೀರ ಆರ್. ಬಾಳಿಕಾಯ ಮೇಲಿನಂತೆ ಅಭಿಪ್ರಾಯ ಪಟ್ಟ ಅವರು ಬೆಳಗಾವಿ ಅತ್ಯಂತ ಹೆಚ್ಚು ಚಿತ್ರಕಲಾವಿದರನ್ನು ಹೊಂದಿರುವಂತಹ ಜಿಲ್ಲೆ ಎಂದು ಹೇಳಿದರು.
ದಿ. ಬಿ. ಕೆ. ಹುಬ್ಳಿ ಶತಮಾನೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಯುವ ಕಲಾವಿದರಾದ ಬಾಳು ಸದಲಗೆ ಅವರು ಮಾತನಾಡಿ ಕೆ. ವೆಂಕಟಪ್ಪ ಪ್ರಶಸ್ತಿ ವಿಜೇತ ಚಿತ್ರಕಲಾವಿದ ದಿ. ಬಿ. ಕೆ. ಹುಬ್ಲಿ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಹುಬ್ಲಿಯವರ ಎಲ್ಲ ಕಲೆಯಗಳನ್ನು ಒಂದೆಡೆ ಸೇರಿಸಿ ಚಿತ್ರಕಲಾ ಪ್ರದರ್ಶನದ ಕೆಲಸವಾಗಬೇಕು ಅದರಂತೆ ಅವರ ಹೆಸರಿನಲ್ಲಿ ಆರ್ಟ ಗ್ಯಾಲರಿಯಾಗುವುದು ಅತ್ಯವಶ್ಯವಾಗಿದೆ ಎಂದು ಹೇಳಿದ ಸದಲಗೆಯವರು ಇಂದು ಅವರ ಹೆಸರಿನಲ್ಲಿ ನೀಡಿದ ಪ್ರಶಸ್ತಿ ನನಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದು ಹೇಳಿದರು.
ಅತಿಥಿಗಳಾಗಿ ಆಗಮಿಸಿದ್ದ ಕಲಾವಿದ ದಿಲೀಪಕುಮಾರ ಕಾಳೆ ಅವರು ಮಾತನಾಡಿ ಹಿರಿಯ ದಿ. ಹುಬ್ಳಿಯವರಿಗೆ ಸಿಗಬೇಕಾದ ಪ್ರಸಿದ್ಧಿ, ಪುರಸ್ಕಾರಗಳು ಸಿಗಲಿಲ್ಲ. ಇನ್ನು ಮೇಲಾದರೂ ಹುಬ್ಳಿಯವರ ಹೆಸರಿನಲ್ಲಿ ಪ್ರತಿಷ್ಠಾನವೊಂದನ್ನು ಸ್ಥಾಪಿಸಬೇಕು. ಅವರ ಹೆಸರಿನಲ್ಲಿ ಚಿತ್ರಕಲೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಲ್ಲದೇ ಒಳ್ಳೊಳ್ಳೆ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯವಾಗಬೇಕು ಎಂದು ಹೇಳಿದರು.
ಶತಾಯುಷಿ ಹಿರಿಯ ಕಲಾವಿದರಾದ ಸೋಮನಾಥ ರೇಡೆಕರ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಕಲಾವಿದರಾದ ವಿ.ಡಿ. ಸಾಲಿ, ಎಸ್. ಕೆ. ಪತ್ತಾರ, ರಾಜು ದೇವಋಷಿ ಹಿರಿಯ ಕಲಾವಿದ ದಿ. ಬಿ. ಕೆ. ಹುಬ್ಳಿಯವರೊಂದಿಗಿನ ಅಪರೂಪ ಕ್ಷಣಗಳನ್ನು ನೆನಪಿಸಿಕೊಂಡರು. ಶಿರೀಷ ದೇಶಪಾಂಡೆ, ಸಚ್ಚಿನ ಉಪಾಧ್ಯ, ನಾಗೇಶ ಚಿಮ್ಮರೋಳಿ, ದೇಮಣ್ಣ ಕಾಟಂಬ್ಳೆ, ಸಂತೋಷ ಮಲ್ಲೋಳ್ಳಿ, ಶ್ರೀಮತಿ ಶಿಲ್ಪಾ ಖಡಕಬಾಯಿ ಮುಂತಾದ ಚಿತ್ರಕಲಾವಿದರು ಉಪಸ್ಥಿತರಿದ್ದರು.
ಶ್ರೀಮತಿ ವೃಶಾಲಿ ಪ್ರಾರ್ಥಿಸಿದರು. ಬಾಳು ಗಸ್ತಿ ನಿರೂಪಿಸಿದರು. ಮಹಾದೇವ ಕಮ್ಮಾರ ಪರಿಚಯಿಸಿದರು. ಜಯಂತ ಹುಬ್ಳಿ ವಂದಿಸಿದರು.
Gadi Kannadiga > Local News > ಕಲಾವಿದ ಬಿ. ಕೆ. ಹುಬ್ಳಿ ಶತಮಾನೋತ್ಸವ ಕಾರ್ಯಕ್ರಮ ಕಲೆಯನ್ನು ಪೋಷಿಸಿ ಕಲಾವಿದರನ್ನು ಗೌರವಿಸಿ: ಬಾಳಿಕಾಯ
ಕಲಾವಿದ ಬಿ. ಕೆ. ಹುಬ್ಳಿ ಶತಮಾನೋತ್ಸವ ಕಾರ್ಯಕ್ರಮ ಕಲೆಯನ್ನು ಪೋಷಿಸಿ ಕಲಾವಿದರನ್ನು ಗೌರವಿಸಿ: ಬಾಳಿಕಾಯ
Suresh28/11/2022
posted on
