This is the title of the web page
This is the title of the web page

Please assign a menu to the primary menu location under menu

Local NewsState

ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಮುರಿದ ಮನೆಯಾಗಿದೆ: ಅರುಣ್ ಸಿಂಗ್


ಬೆಳಗಾವಿ: ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಾಕರಿಲ್ಲದ ಪಕ್ಷವಾಗಿದ್ದು ನಾಯಕತ್ವದ ವೈಪಲ್ಯದಿಂದ ಸಂಪೂರ್ಣವಾಗಿ ಕುಸಿದಿದೆ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಂಚರಾಜ್ಯ ಚುನಾವಣೆಯಲ್ಲಿ ಸೋಲಿಸಿ ಸರಿಯಾದ ುತ್ತರ ನೀಡಿದ್ದಾರೆ ಕರ್ನಾಡಕದಲ್ಲಿಯುವ ಕಾಂಗ್ರೆಸ್ ಮಾಯವಾಗಲಿದೆ ಎಂದು  ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ವಾಗ್ದಾಳಿ ನಡೆಸಿದರು.

ಮಂಗಳವಾರ  ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ಇಗೋಷ್ಟಿಯಲ್ಲಿ ಅವರು ಮಾತನಾಡಿದರು. ಬಿಜೆಪಿ ನಾಯಕರು ಮೂರು ತಂಡಗಳಾಗಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದು ಪಕ್ಷ ಬಲಪಡಿಸುವ ಕೆಲಸ ಮಾಡಲಾಗುತ್ತದೆ. ನಾಲ್ಕು ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲವು ಸಾಧಿಸಿದೆ. ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಕಂಡ ನಲ್ಲಿ ಬಿಜೆಪಿ ಸರ್ಕಾರ ಸತತ ಎರಡು ಬಾರಿ ಗೆಲುವು ಸಾಧಿಸುವುದರ ಮೂಲಕ ಕಾಂಗ್ರೆಸ್ ಅಲ್ಲಿಂದ ಕಾಲು ಕೀಳುವಂತೆ ಮಾಡಲಾಗಿದ್ದು. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಎರಡನೇ ಬಾರಿ ಬಿಜೆಪಿ 150ಕ್ಕೂ‌ ಹೆಚ್ಚು ಸ್ಥಾನ ಗೆದ್ದು ಸಂಪೂರ್ಣ ‌ಬಹುಮತದ ಸರ್ಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ. ಕಾಮಗ್ರೆಸ್ ಪಕ್ಷದಲ್ಲಿ ನಾಯಕತ್ವ ಗೊಂದಲದ ಗೂಡಾಗಿದ್ದು ಸಂಪೂರ್ಣ ವೈಪಲ್ಯ ಹೊಂದಿದ ಪಕ್ಷವಾಗಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವಷ್ಟು ಕೂಡ ರಾಹುಲ್ ಗಾಂಧಿ ಅವರಲ್ಲಿ ಶಕ್ತಿ ಇಲ್ಲ ದಂತಾಗಿದೆ. ಕರ್ನಾಟಕದಲ್ಲಿಯೂ ಮುರಿದ ಮನೆಯಂತಾಗಿದ್ದು ಕರ್ನಾಟಕವನ್ನು ಗೆದ್ದು ಎಟಿಎಂ ತರ ಬಳಕೆ ಮಾಡಿಕೊಂಡು ಬೇರೆ ರಾಜ್ಯಗಳನ್ನು ಗೆಲವು ಸಾಧಿಸಬೇಕೆಂಬ ಕನಸು ಕಾಣುತ್ತಿದೆ ಸ್ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಜನತೆ ಕಾಂಗ್ರೆಸ್ ಕನಸು ನನಸಾಗಲು  ಬಿಡುವುದಿಲ್ಲ ಎನ್ನುವ ಭರವಸೆ ನಮಗೆ ಇದೆ ಎಂದರು. ಕೆಂದ್ರ ಮತ್ತು ರಾಜ್ಯ ಸರಕಾರದ ಅಭಿವೃದ್ಧಿಪರ ಕೆಲಸಗಳ ಕುರಿತು ಮಾತನಾಡುತ್ತ ಕೆಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರಕಾರವಿದ್ದು ಡಬಲ್ ಇಂಜಿನ್ ಸರಕಾರದ ಮೂಲಕ ಕರ್ನಾಟಕದ ಅಭಿವೃದ್ಧಿ ಮಾಡಿಲಾಗುತ್ತಿದೆ ಎಂದರು.  ಬೆಲೆ ಏರಿಕೆಯ ಬಗ್ಗೆ ಮಾದ್ಯದವರ ಪ್ರಶ್ನೆಗೆ ಪ್ರತಿಕ್ರಯಿಸಿದ ಅವರು, ಶೀಘ್ರದಲ್ಲೇ ಅದಕ್ಕೆ ಒಂದು ಕೊನೆ ಹಾಡಲಾಗುವುದು ಎಂದರು.

ಪ್ರಧಾನಿ ನರೇಂದ್ರ ‌ಮೋದಿ ಯೋಜನೆಯನ್ನು ದೇಶದ ಜನತೆ ಮೆಚ್ಚಿಕೊಂಡಿದ್ದಾರೆ. ಬಿಜೆಪಿಯು ಹೆಚ್ಚಿನ ಮತಗಳಿಂದ ಮುಂಬರುವ ಚುನಾವಣೆಯಲ್ಲಿ ಗೆಲವು ಸಾಧಿಸಲಿದೆ ಎಂದರು. ಉತ್ತರ ಕರ್ನಾಟಕದ ಮಹದಾಯಿ ಸಮಸ್ಯೆಗೆ ಪ್ರತಿಕ್ರಿಯಿಸಿ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು. ಇದು ದೊಡ್ಡ ವಿಷಯವಾಗಿದೆ. ಈ ಸಮಸ್ಯೆ ಬಗೆ ಹರಿಸಲಾಗುವುದು ಎಂದರು.

ಸುದ್ದಿಗೋಷ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಮಾಜಿ ರಾಜ್ಯ ಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply