ಬಳ್ಳಾರಿ ಫೆ ೧೮. ಮಂಡ್ಯದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ರವರು ಭಾಷಣ ಬರದಲ್ಲಿ ಕರ್ನಾಟಕದ ಧೀಮಂತ ನಾಯಕ, ಅಭಿವೃದ್ಧಿಯ ಹರಿಕಾರ, ಭಾಗ್ಯಗಳ ಸರದಾರ, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಗ್ಗೆ ಒಂದು ಪ್ರಚೋದನಕಾರಿ ಹೇಳಿಕೆಯನ್ನು ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಅವರನ್ನು ಯಾವ ರೀತಿ ಹೊಡೆದಾಕಿದರೋ, ಅದೇ ತರ ಸಿದ್ದರಾಮಯ್ಯ ಅವರನ್ನು ಹೊಡೆಯಬೇಕೆಂದು ಪ್ರಚೋದನೆ ಹೇಳಿಕೆಯನ್ನು ನೀಡಿದ್ದಾರೆ. ಸ್ವಾಮಿ ನೀವು ಸಿದ್ದರಾಮಯ್ಯ ಅವರನ್ನು ಹೊಡೆಯುವುದಲ್ಲ ಟಚ್ ಮಾಡಿ ನೋಡಿ ನಾವು ಏನಂತ ನಿಮಗೆ ತೋರಿಸುತ್ತೇವೆ. ಎಲುಬು ಇಲ್ಲದ ನಾಲಿಗೆ ಏನು ಬೇಕಾದರೂ ಮಾತನಾಡುತ್ತೆ ಅಂತ ಹೇಳಿ ಸಿದ್ದರಾಮಯ್ಯ ಅಪ್ಪಾಜಿ ಬಗ್ಗೆ ಮಾತನಾಡಿದರೆ ನಾವೇನು ಸುಮ್ಮನಿರಲು ಕೈಗೆ ಬಳೆಗಳನ್ನು ತೊಟ್ಟಿಲ್ಲ ಸ್ವಾಮಿ. ಮಾತನಾಡುವ ಸಮಯದಲ್ಲಿ ಏನು ಮಾತಾಡ್ತಿದ್ದೆನೆ, ಏನಿಲ್ಲ ಯಾರ ಬಗ್ಗೆ ಮಾತಾಡ್ತಾ ಇದೀನಿ ಅಂತ ಗಮನವಿರಲಿ, ನಿಮಗೆ ನಾಚಿಕೆ ಆಗಬೇಕು ಬಿಜೆಪಿ ಅವರಿಗೆ ನೆಟ್ಟಗೆ ಒಬ್ಬ ಮುಖ್ಯಮಂತ್ರಿಯಾಗಲಿ ಐದು ವರ್ಷ ಸಂಪೂರ್ಣವಾಗಿ ಅಧಿಕಾರವನ್ನು ಪೂರ್ಣಗೊಳಿಸಲಿಲ್ಲ ಎಂದು ಎಂ.ಜಿ ಕನಕ ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣನವರಮೇಲೆ ಕಿಡಿ ಕಾರಿದ್ದಾರೆ.
ಕರ್ನಾಟಕ ಸರ್ಕಾರದ ಜವಾಬ್ದಾರಿ ಹಾಗೂ ನಾಲಾಯಕ್ ಮಂತ್ರಿಯಾದ ಡಾಕ್ಟರ್ ಸಿ ಅಶ್ವಥ್ ನಾರಾಯಣ್ ಅವರು ನೀಡಿರುವ ಪ್ರಚೋದನೆ ಹಾಗೂ ಸಂವಿಧಾನ ಬಾಹಿರ ಹೇಳಿಕೆಯನ್ನು ಪರಿಗಣಿಸಿ ಅವರನ್ನು ಕರ್ನಾಟಕ ಸರ್ಕಾರ ಸಚಿವ ಸಂಪುಟದಿಂದ ತಕ್ಷಣವೇ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಂಡು ತಕ್ಷಣವೇ ಬಂಧಿಸುವಂತೆ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ “ಝೆಡ್ ಪ್ಲಸ್” ಶ್ರೇಣಿಯ ಭದ್ರತೆಯನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.