ಯಮಕನಮರಡಿ : ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯ ಇಂದು ಸಿ.ಇ.ಎಸ್ ಮೈದಾನ ಯಮಕನಮರಡಿ ಯಲ್ಲಿ ಜರುಗಿತು. ಫೈನಲ್ ಪಂದ್ಯದಲ್ಲಿ ಅತಿಕಾ ತಂಡವನ್ನು ಸೋಲಿಸಿ ಗಣೇಶ ತಂಡ ಚಾಂಪಿಯನ್ ಆಗಿ ಇತಿಹಾಸ ರಚಿಸಿತು. ಈ ಪಂದ್ಯಾವಳಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಯುವ ಧುರಿಣರಾದ ಕಿರಣಸಿಂಗ ರಜಪೂತ ಬಹುಮಾನ ವಿತರಣೆ ವೇಳೆ ಮಾತನಾಡಿ… ಪಂದ್ಯಾವಳಿ ತುಂಬಾ ಚೆನ್ನಾಗಿ ಆಯೋಜನೆ ಮಾಡಿದ್ದಿರಾ ಹೀಗೆ £Ãವು ಮುಂದೆ ಯಾವುದೆ ಕ್ರೀಡೆಯನ್ನು ಆಯೋಜನೆ ಮಾಡಿ ನಾನು ಸಹಾಯ ಮಾಡಲು ಸಿದ್ಧ. ಜೊತೆಗೆ ಮುಂಬರುವ ದಿನಗಳಲ್ಲಿ ಇದೆ ಮೈದಾನದಲ್ಲಿ ೨೫೦೦೦ ಮೊತ್ತದ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಯಮಕನಮರಡಿ ಗ್ರಾಮದ ಗಣ್ಯರಾದ ಶ್ರೀ ಸದಾನಂದ ಗುಡಿಕಡೆ, ಅಭಿಜಿತ್ ಪಾಟೀಲ್, ದೇವಪ್ಪಾ ಹೂನ್ನೂರಿ, ಖುತುಬುದ್ದಿನ ಬೇಪಾರಿ, ಶೌಕತ್ ಖಾಜಿ ಗೊವಿಂದ ದಿಕ್ಷೀತ ಸರ್ ಮತ್ತು ಪರುಶುರಾಮ ಪಾಟೀಲ ಉಪಸ್ಥಿತರಿದ್ದರು. ತೃತೀಯ ಬಹುಮಾನ ಖಾಜಿ ಬಾಯ್ಸ ಹಾಗೂ ಚತುರ್ಥ ಬಹುಮಾನ ತಮಣ್ಣಾ ತಂಡ ಗೆದ್ದುಕೊಂಡಿತು. ಈ ಪಂದ್ಯಾವಳಿಯ ಸಂಘಟನೆ. ಮುಜಾಹೀದ ನಾಲಬಂದ ಮತ್ತು ಅಸಗರ ಖಾಜಿ ವಹಿಸಿಕೊಂಡಿದ್ದರು. ಮತ್ತು ಕಾರ್ಯಕ್ರಮವನ್ನು ರಮಜಾನ ನದಾಫ ಸರ್ ನಡೆಸಿಕೊಟ್ಟರು.
Gadi Kannadiga > State > ಕ್ರಿಕೆಟ್ ಪಂದ್ಯಾವಳಿಯಲ್ಲಿ ಅತಿಕಾ ತಂಡಕ್ಕೆ ಜಯ