This is the title of the web page
This is the title of the web page

Please assign a menu to the primary menu location under menu

Local News

ಅಕ್ರಮ ತಂಬಾಕು ಮಾರಾಟ: ಅಧಿಕಾರಿಗಳಿಂದ ದಾಳಿ


ಬೆಳಗಾವಿ,ಜುಲೈ೨೫: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಅಧಿಕಾರಿಗಳು ಕಾಕತಿ ಗ್ರಾಮ ಹಾಗೂ ಶಾಹಾಪೂರ ನಗರದಲ್ಲಿ ಕೋಟ್ಪಾ -೨೦೦೩ ಕಾಯ್ದೆ ಅಡಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ್ದಾರೆ.
ಒಟ್ಟು ೪೮ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿ ಸೆಕ್ಷನ್-೪ ನಾಮಫಲಕವನ್ನು ವಿತರಿಸಲಾಯಿತು. ಹಾಗೂ ಸಾರ್ವಜನಿಕರಲ್ಲಿ ತಂಬಾಕು ಸೇವನೆಯ ದುಷ್ಪರೀಣಾಮದ ಕುರಿತು ಅರಿವು ಮೂಡಿಸಲಾಯಿತು. ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಸಮಾಜ ಕಾರ್ಯಕರ್ತೆ,ಹೀರಿಯ ಆರೋಗ್ಯ ಸಹಾಯಕ ರವಿ ಗುರವನ್ನವರ, ಮಂಜುನಾಥ ಹುಲಕುಂದ ಮೆಹಬುಬಸಾಬ ನದಾಪ್ ಪೊಲೀಸ್ ಇಲಾಖೆಯ ಪೊಲೀಸ ಸಿಬ್ಬಂದಿಗಳು ಪಾಲ್ಗೊಂಡಿದ್ದರು.


Gadi Kannadiga

Leave a Reply