ಗದಗ ಜನೆವರಿ ೧೯: ತೋಟಗಾರಿಕೆ ಇಲಾಖೆಯಿಂದ ೨೦೨೨-೨೩ ನೇ ಸಾಲಿನ ರಾಷ್ಟ್ರೀಯ ಕೃಷಿ ವಿಸ್ತರಣೆ ಮತ್ತು ತಂತ್ರಜ್ಞಾನ ಅಭಿಯಾನ ಯೋಜನೆಯ ಕೃಷಿ ಯಾಂತ್ರೀಕರಣ ಉಪ ಅಭಿಯಾನ ಕಾರ್ಯಕ್ರಮದಡಿ ಕೃಷಿ ಯಂತ್ರೋಪಕರಣ ಖರೀದಿಸುವ ತೋಟಗಾರಿಕೆ ಬೆಳೆ ಬೆಳೆಯುವ ರೈತಭಾಂದವರಿಂದ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಿಂದ ಅನುಮೋದಿಸಿದ ಸಂಸ್ಥೆಯಿಂದ ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ಫಲಾನುಭವಿಗಳಿಗೆ ಶೇ ೫೦ ರ ಸಹಾಯಧನ ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಶೇ ೪೦ ರ ಸಹಾಯಧನದ ಸೌಲಭ್ಯವಿರುತ್ತದೆ. ವಿವಿಧ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದು, ಅದರ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ಕಾರ್ಯಕ್ರಮದಡಿ ನೀರಿನಲ್ಲಿ ಕರಗುವ ರಸಗೊಬ್ಬರ ಲಘು ಪೋಷಕಾಂಶ ಮಿಶ್ರಣಗಳನ್ನು ರಿಯಾಯಿತಿ ದರಗಳಲ್ಲಿ ವಿತರಿಸಲಾಗುವುದು. ಹಣ್ಣಿನ ಗಿಡಗಳ ಮೇಲಾವರಣ ನಿರ್ವಹಣೆ ಸೊಲಾರ್ ಪಂಪ್‌ಸೈಟ್, ಫಾರಂ ಗೇಟ್, ವಿವಿಧ ಅಳತೆಯ ಕೃಷಿಹೊಂಡ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದಾಗಿದೆ.
Gadi Kannadiga > State > ರೈತ ಬಾಂಧವರ ಗಮನಕ್ಕೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023