This is the title of the web page
This is the title of the web page

Please assign a menu to the primary menu location under menu

State

ರೈತ ಬಾಂಧವರ ಗಮನಕ್ಕೆ


ಗದಗ ಅಗಸ್ಟ ೧: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ೨೦೨೩-೨೪ ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮೀಣ ಭಾಗದಲ್ಲಿ ಮಾವು, ತೆಂಗು, ಪೇರಲ, ದ್ರಾಕ್ಷಿ, ದಾಳಿಂಬೆ, ಬಾಳೆ,ಪಪ್ಪಾಯ, ನಿಂಬೆ, ಸೀತಾಫಲ, ಅಂಜೂರ, ನೇರಳೆ, ಬಾರೆ, ಡ್ರಾö್ಯಗನ್ ಹಣ್ಣು, ಗೋಡಂಬಿ, ವಿಳ್ಯೆದೆಲೆ, ಹುಣಸೆ, ಕರಿಬೇವು ಬೆಳೆಗಳ ಪ್ರದೇಶ ವಿಸ್ತರಣೆಗೆ, ಹನಿ ನೀರಾÀವರಿ ತಾಕುಗಳ ಕಂದಕಗಳನ್ನು ತೆಗೆಯಲು ಹಾಗೂ ಮಣ್ಣು ಸಂರಕ್ಷಣಾ ಕಾಮಗಾರಿಗಳಾದ ಕೃಷಿಹೂಂಡಗಳನ್ನು ಕೈಗೊಳ್ಳಲು ಜಿಲ್ಲೆಯ ರೈತ ಬಾಂದವರಿಗೆ ಉತ್ತಮ ಅವಕಾಶವಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳ ಆಸಕ್ತ ರೈತ ಬಾಂಧವರು ಅರ್ಜಿ ಸಲ್ಲಿಸಲು ಸಮೀಪದ ಗ್ರಾಮ ಪಂಚಾಯತ್ ಅಥವಾ ತೋಟಗಾರಿಕೆ ಕಛೇರಿಗೆ ಸಂಪರ್ಕಿಸಬಹುದಾಗಿದೆ.


Leave a Reply