ಗದಗ ಎಪ್ರಿಲ್ ೧: ಗದಗ ಜಿಲ್ಲೆಯಲ್ಲಿ ಬರುವ ೧೦೬ ಹಣಕಾಸು / ಗಿರವಿದಾರರು/ ಲೇವಾದೇವಿಗಾರರ ಸಂಸ್ಥೆಗಳನ್ನು ಹಲವಾರು ವರ್ಷಗಳಿಂದ ನವೀಕರಣಗೊಳಿಸದೇ ಇರುವುದರಿಂದ ಲೈಸನ್ಸ್ ಗಳನ್ನು ರದ್ದುಪಡಿಸಿ ಭದ್ರತಾ ಠೇವಣಿಯನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲಾಗಿರುತ್ತದೆ. ೧೦೬ ಹಣಕಾಸು/ ಗಿರವಿದಾರರು/ ಲೇವಾದೇವಿಗಾರರ ಸಂಸ್ಥೆಗಳ ಯಾದಿಯನ್ನು ಸಹಕಾರ ಸಂಘಗಳ ಉಪನಿಬಂಧಕರು/ ಜಿಲ್ಲಾ ಆಡಳಿತ ಭವನ, ಕೊಠಡಿ ಸಂಖ್ಯೆ -೧೨೫ , ಗದಗ ಜಿಲ್ಲೆ ,ಗದಗ ಇವರ ಕಚೇರಿಯಲ್ಲಿ ನೋಟೀಸ ಬೋರ್ಡಿನಲ್ಲಿ ಪ್ರಕಟಿಸಲಾಗಿದ್ದು ಪರಿಶೀಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗದಗ ಸಹಕಾರ ಸಂಘಗಳ ಉಪನಿಬಂಧಕರು ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.
Gadi Kannadiga > State > ಹಣಕಾಸು ಸಂಸ್ಥೆ/ ಗಿರವಿದಾರರು/ ಲೇವಾದೇವಿಗಾರರ ಸಂಸ್ಥೆಗಳ ಗಮನಕ್ಕೆ