ಗಡಿ ಕನ್ನಡಿಗ
ಖಾನಾಪುರ:ಪಟ್ಟಣದಲ್ಲಿ ಅವದಿ ಮುಗಿದ ತಂಪು ಪಾನೀಯ ಮಾರಾಟ ಮಾಡುತ್ತಿರುವ ಜಾಲ ಸಕ್ರೀಯವಾಗಿದೆ ಅವದಿ ಮುಗಿದು ತಿಂಗಳು ಕಳೆದ ನಂತರವೂ ಪಾನೀಯಗಳನ್ನ ಬದಲಾಯಿಸದೇ ಹಾಗೇ ಮಾರುತ್ತಿದ್ದು ಅಂತಹ ತಂಪು ಪಾನೀಯ ಕುಡಿದು ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ನಡೆದಿದೆ.
ಪಟ್ಟಣದ ರವಿವಾರ ಪೇಟೆಯಲ್ಲಿರುವ B M KHALIFA ಎಂಬ ಅಂಗಡಿಯಲ್ಲಿ ವ್ಯಕ್ತಿಯೊಬ್ಬರು ರವಿವಾರ ತಮ್ಮ ಮಗನ ಹುಟ್ಟು ಹಬ್ಬದ ನಿಮಿತ್ಯ ತಂಪು ಪಾನೀಯ ಖರಿದಿಗೆಂದು ಪಟ್ಟಣದ ಹೃದಯಭಾಗದ ಖಲೀಫಾ ಎಂಬ ಅಂಗಡಿಯಲ್ಲಿ 750ml ನ ಮೂರು ಬಾಟಲಿ ಖರೀದಿ ಮಾಡಿದ್ದು ಅದರಲ್ಲಿ ಒಂದನ್ನ ತಾವೇ ಕುಡಿದು ಸ್ವಲ್ಪ ಹೊತ್ತಿನಲ್ಲೇ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ನೀವು ವಿಷಾಹಾರ ಸೇವಿಸಿದ್ದಿರಿ ಎಂದಾಗ ತಂಪು ಪಾನೀಯದ ಅವದಿ ಮೀರಿದ್ದು ಕಂಡು ಬಂದಿದ್ದು ಕೂಡಲೇ ಪೊಲೀಸ್ ಠಾಣೆಗೆ ತಿಳಿಸಿದ್ದು ಇನ್ನ ಮೇಲಾದರೂ ಸಂಬಂದಪಟ್ಟ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರಾ ಕಾದುನೋಡಬೇಕಿದೆ.