This is the title of the web page
This is the title of the web page

Please assign a menu to the primary menu location under menu

Local News

ಮಲೇರಿಯಾ ಮಾಸಾಚರಣೆ ಮಲೇರಿಯಾ ನಿಯಂತ್ರಣಕ್ಕಾಗಿ ಜಾಗೃತೆ ಅಗತ್ಯ: ಡಾ. ಶಿವಾನಂದ ಮಾಸ್ತಿಹೊಳಿ


ಬೆಳಗಾವಿ,ಜೂನ್೨೪: ಮಳೆಗಾಲ ಆರಂಭವಾಗಿದ್ದರಿಂದ ಮನೆ, ನಾವಿರುವ ಪ್ರದೇಶದ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಇದರಿಂದ ಸೊಳ್ಳೆಗಳ ಹಾವಳಿ ತಡೆಯುವದರ ಮೂಲಕ ಮಲೇರಿಯಾ ನಿಯಂತ್ರಿಸಬಹುದು ಎಂದು ಬೆಳಗಾವಿ ತಾಲುಕಾ ವೈದ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಯಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಹಲಗಾದಲ್ಲಿರುವ ಆರ್.ಡಿ. ದೊಡ್ಡಣ್ಣವರ ಭರತೇಶ ನರ್ಸಿಂಗ ಕಾಲೇಜಿನಲ್ಲಿ ಮಲೇರಿಯಾ ಮಾಸಾಚರಣೆಯ ಅಂಗವಾಗಿ ಗುರುವಾರ (ಜೂನ್೨೩) ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಾಸಾಚಣಿಯ ಕುರಿತು ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಚೈತ್ರಾ ಕೆ, ಅಭಿಷೇಕ ದ್ವಿತೀಯ, ಪದ್ಮಜಾ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಭರತೇಶ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಗೀತಾ ಮೋರೇಶ್ವರ, ಯಳ್ಳೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ರಮೇಶ ದಂಡಗಿ, ಎಂಟಾಮಾಲಾಜಿಸ್ಟ್ ಗಣಪತಿ ಬಾರ್ಕಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿ.ಎಲ್. ಪಾತಲಿ ಹಾಗೂ ನರ್ಸಿಂಗ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಫ್.ಎಂ. ಮಾಲಿಹಾಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Gadi Kannadiga

Leave a Reply