This is the title of the web page
This is the title of the web page

Please assign a menu to the primary menu location under menu

Local News

ಶಿಕ್ಷಣದ ಮಹತ್ವ, ಹಾಗೂ ಆರೋಗ್ಯ ಕಾಳಜಿ, ಕುರಿತು ಜಾಗೃತಿ ಕಾರ್ಯಾಕ್ರಮ


ಬೆಳಗಾವಿ,ಜುಲೈ೨೨: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ £ಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಶಿಶು ಅಭಿವೃದ್ಧಿ ಯೋಜನೆ, ಬೆಳಗಾವಿ (ಗ್ರಾಮೀಣ) ಹಾಗೂ ಜಿಲ್ಲಾ ಮಟ್ಟದ ಮಹಿಳಾ ಶಕ್ತಿ ಕೇಂದ್ರ ಬೆಳಗಾವಿ ಇವರುಗಳ ಸಯುಂಕ್ತಾಶ್ರಯದಲ್ಲಿ ಬಾಲ್ಯ ವಿವಾಹ £ಷೇಧ ಕಾಯ್ದೆ, ಮಕ್ಕಳ ಕಳ್ಳ ಸಾಗಾಣಿಕೆ, ಶಿಕ್ಷಣದ ಮಹತ್ವ, ಹಾಗೂ ಆರೋಗ್ಯ ಕಾಳಜಿ, ಕುರಿತು ಬೆಳಗಾವಿ ಜಿಲ್ಲೆಯ ಬೆಳಗಾವಿ ಗ್ರಾಮೀಣ ವಲಯದ ಕುಕಡೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕರಯಾದ ಕುಮಾರಿ. ಕವಿತಾ ಹೊಸಮ£ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಕಲಿತ ನಾರಿ ಪ್ರಗತಿಗೆ ದಾರಿ ಎಂಬ £ಟ್ಟಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ, ಹದಿ ಹರೆಯದ ಹೆಣ್ಣು ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯ ಪರಿವರ್ತನೆ, ಬಾಲ್ಯ ವಿವಾಹ £ಷೇಧ ಕಾಯ್ದೆ, ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಮಗಳು, ಬಾಲ್ಯ ವಿವಾಹ ಮಾಡಿದರೆ ವಿಧಿಸುವ ದಂಡ ಹಾಗೂ ಶಿಕ್ಷೆಯ ಕುರಿತು ಮಾಹಿತಿ £Ãಡಿದರು. ಬಾಲ್ಯ ವಿವಾಹವು ನಡೆಯುತ್ತಿರುವ ಸಂದರ್ಭ ಕಂಡು ಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕೆಂದು ತಿಳಿಸಿದರು.ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯನ್ನು ಮಾಡಿ ಅಕ್ರಮ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುತ್ತಾರೆ ಎಂದು ಅರಿವು ಮೂಡಿಸಿದರು. ಮಹಿಳಾ ಸಹಾಯವಾಣಿ-೧೦೯೧, ಮಕ್ಕಳ ಸಹಾಯವಾಣಿ-೧೦೯೮ ಬಗ್ಗೆ ಮಾಹಿತಿ £Ãಡಿದರು.
ಇನ್ನೋರ್ವ ಮಹಿಳಾ ಶಕ್ತಿ ಕೇಂದ್ರದ ಜಿಲ್ಲಾ ಸಂಯೋಜಕರಯಾದ ಕು. ಪ್ರೀಯಂಕಾ ಖೋತ ಇವರು ಮಾತನಾಡುತ್ತಾ ಪೌಷ್ಠಿಕ ಆಹಾರದ ಮಹತ್ವ, ಋತುಮತಿ ನಂತರದ ಬದಲಾವಣೆಗಳು, ರಕ್ತ ಹೀನತೆ, ಶಿಕ್ಷಣದ ಮಹತ್ವ, ಆತ್ಮ ವಿಶ್ವಾಸ ಅಳವಡಿಸಿಕ್ಕೂಳ್ಳುವಿಕೆ, ಪಠ್ಯೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಸಕ್ರಿಯವಾಗಿ ಭಾಗವಹಿಸುವಿಕೆ ಬಗ್ಗೆ ಜಾಗ್ರತಿ ಮೂಡಿಸಿದರು.
ಅಧ್ಯಕ್ಷ ಸ್ಥಾನ ಅಲಂಕರಿಸಿದ ಉಮೇಶ ಪಾಶ್ಚಾಪೂರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಾಚಾರ್ಯರು, ಮಾತನಾಡಿ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆದು ಪ್ರತಿಯೊಂದು ಕ್ಷೇತ್ರದಲ್ಲೂ ಸಾಕಷ್ಟು ಪ್ರಮಾಣದಲ್ಲಿ ಪ್ರಗತಿ ಸಾಧಿಸಿದ್ದಾರೆ ಹಾಗೂ ಬಾಲ್ಯ ವಿವಾಹ £ಷೇಧ ಕಾಯ್ದೆ ಕುರಿತು ಮಕ್ಕಳಿಗೆ ಉದಾಹರಣೆ ಮೂಲಕ ತಿಳಿಸಿದ್ದರು.
ಸಹ ಶಿಕ್ಷಕರು, ಜಿಲ್ಲಾ ಮಟ್ಟದ ಮಹಿಳಾ ಶಕ್ತಿ ಕೇಂದ್ರದ ಸಿಬ್ಬಂದಿಗಳು ಅತಿಥಿ ಉಪನ್ಯಾಸಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರುಮತ್ತು ಸಮುದಾಯದ ಆರೋಗ್ಯ ಅಧಿಕಾರಿ ಉಪಸ್ಥಿತರಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೯೦ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ನಾಗರಾಜ ಮೇಳದ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಸಹ ಶಿಕ್ಷಕರು ಇವರು ಕಾರ್ಯಕ್ರಮವನ್ನು £ರೂಪಿಸಿದರು, ನೇಮಣ್ಣಾ ದೊಡಮ£ ಇವರು ವಂದಿಸಿದರು.


Gadi Kannadiga

Leave a Reply