This is the title of the web page
This is the title of the web page

Please assign a menu to the primary menu location under menu

Local News

ಚರ್ಮರೋಗ ತಪಾಸಣೆ ಅಭಿಯಾನ ಕುರಿತ ಅರಿವು ಕಾರ್ಯಕ್ರಮ ಯಶಸ್ವಿ


ಕೊಪ್ಪಳ, ಸೆ. ೧೭: ಚರ್ಮರೋಗ ತಪಾಸಣೆ ಅಭಿಯಾನ ಕುರಿತು ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿವು ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕುಷ್ಟಗಿ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ತಾವರಗೇರಾ ಸಮುದಾಯ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ “ಚರ್ಮರೋಗ ತಪಾಸಣೆ ಅಭಿಯಾನ” ಕುರಿತು ತಾವರಗೇರಾ ಪಟ್ಟಣದ ಎ.ಸಿ ಕಾಲೋನಿಯಲ್ಲಿ ಅರಿವು ಕಾರ್ಯಕ್ರಮ ಇತ್ತೀಚೆಗೆ (ಸೆ.೧೩) ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸೆ. ೨೮ ರವರೆಗೆ “ಚರ್ಮರೋಗ ತಪಾಸಣೆ ಅಭಿಯಾನÀ” ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮನೆಗೆ ಆಶಾ ಮತ್ತು ಸ್ವಯಂ ಸೇವಕರು ಸಮೀಕ್ಷೆ ಕಾರ್ಯಕ್ಕೆ ಬಂದಾಗ ಸರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು. ಯಾರಿಗಾದರೂ ದೇಹದ ಮೇಲೆ ತಿಳಿ-ಬಿಳಿ ತಾಮ್ರವರ್ಣದ ಸ್ಪರ್ಶ್ಜ್ಞಾನವಿಲ್ಲದ ೩ ಅಥವಾ ೩ಕ್ಕಿಂತ ಹೆಚ್ಚು ಮಚ್ಚೆಗಳು ಇದ್ದರೆ, ಪಾದಗಳ ದೌರ್ಬಲ್ಯ, ಬೆರಳುಗಳ ದೌರ್ಬಲ್ಯ, ತ್ವಚೆಯ ಮೇಲೆ ಕೆಂಪಾದ ಬಾವು, ಕಣ್ಣು ಮುಚ್ಚುವಲ್ಲಿ ತೊಂದರೆ ಕಾಣಿಸಿಕೊಂಡರೆ, ಇವು ಕುಷ್ಠರೋಗದ ಲಕ್ಷಣಗಳಾಗಿರಬಹುದು. ಆದ್ದರಿಂದ ಇಂತಹ ಲಕ್ಷಣಗಳು ಯಾರಿಗಾದರು ಕಾಣಿಸಿಕೊಂಡರೆ, ತಕ್ಷಣ ತಮ್ಮ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಪರೀಕ್ಷಿಸಿಕೊಂಡು ಖಚಿತ ಪಟ್ಟರೆ ಉಚಿತವಾಗಿ ಚಿಕಿತ್ಸೆ ಪಡೆಯಿರಿ. ಇದಕ್ಕೆ ಯಾರು ಹಿಂಜರಿಯಬಾರದು, ಇದು ಮೈಕ್ರೊಬ್ಯಾಕ್ಟಿರಿಯಾ ಲೆಪ್ರೆöÊ ಎಂಬ ಸೂಕ್ಷಾö್ಮಣುವಿನಿಂದ ಗಾಳಿ ಮೂಲಕ ಹರಡುತ್ತದೆ. ಇದೊಂದು ಸಾಂಕ್ರಾಮಿಕ ರೋಗವಾಗಿದೆ. ರೋಗಿಯು ಕೆಮ್ಮುವುದರ ಮೂಲಕ ಮತ್ತು ಸೀನುವುದರ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ಖಂಡಿತ ಗುಣಮುಖವಾಗುವಂತ ಖಾಯಿಲೆಯಾಗಿದ್ದು, ಎಂ.ಡಿ.ಟಿ ಚಿಕಿತ್ಸೆಯಿಂದ ಗುಣ ಪಡಿಸಬಹುದು. “ಕುಷ್ಠ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿ” ಮಾಡುವುದು ನಮ್ಮ ನಿಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಂಕ್ರಮ್ಮ ಅವರು “ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಚರಣೆ” ಬಗ್ಗೆ ಆರೋಗ್ಯಮೀತ್ರ ಇಮ್ರಾನ್‌ಸಾಬ್ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್ ಕುರಿತು, ಆಪ್ತಾಸಮಾಲೋಚಕ ಅರುಣ ಕುಮಾರ ಕೋವಿಡ್-೧೯ ಲಸಿಕೆ, ರಕ್ತಹೀನತೆ ಮುಕ್ತ ಭಾರತ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕಾ ಆಶಾ ಮೇಲ್ವಿಚಾರಕಿ ಸವೀತಾ ಸೇರಿದಂತೆ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ವಾರ್ಡಿನ ಮುಖಂಡರು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಿದರು. ನಂತರ ಪಟ್ಟಣದ ವಿವಿದ ವಾರ್ಡ್ಗಳಲ್ಲಿ ಐ.ಇ.ಸಿ ವಾಹನದ ಮೂಲಕ ಚರ್ಮರೋಗ ತಪಾಸಣೆ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.


Gadi Kannadiga

Leave a Reply