ಬೆಳಗಾವಿ: – ಕೆಎಲ್‌ಇ ವೇಣುಧ್ವನಿ ೯೦.೪ ಎಫ್‌ಎಮ್ ಸಮುದಾಯ ಬಾನುಲಿ ಕೇಂದ್ರ, ಬೆಳಗಾವಿ, ಬೆಳಗಾವಿ ರೊಂಡ್ ಟೇಬಲ್ (ಬಿಆರ್‌ಟಿ೧೧೯) ಸಂಸ್ಥೆ ಹಾಗೂ ಕರ್ನಾಟಕ ಸರ್ಕಾರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಜಿಲ್ಲಾ ಪಂಚಾಯತ ಬೆಳಗಾವಿ ಸಹಯೋಗದಲ್ಲಿ ಕೌಲಾಪೂರವಾಡಾ ಗ್ರಾಮದಲ್ಲಿ ದಿನಾಂಕ ೨೩ನೆ ಮಾರ್ಚ್ ೨೦೨೩ ರಂದು “ವಿಶ್ವ ಜಲ ದಿನದ” ಪ್ರಯುಕ್ತ ಕುಡಿಯುವ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರೀಕ ವಿಶ್ವವಿದ್ಯಾಲಯದ ನೀರು ಮತ್ತು ಭೂಮಿ ನಿರ್ವಹಣೆ ವಿಭಾಗದ ಸಹ ಪ್ರಾಧ್ಯಾಪಕರಾದ ಪ್ರೋ. ರೋಹನ್ ಗುರವ ಅವರು ಮಾತನಾಡಿ ದಿನ ಬಳಕೆಯಲ್ಲಿ ನೀರಿನ ಬಳಕೆ ಹೆಚ್ಚಾಗುತ್ತಿದ್ದು ಶುದ್ಧ ಕುಡಿಯುವ ನೀರಿಗಾಗಿ ಜನ ಸಮಸ್ಯೆಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ನೀರಿನ ಮಹತ್ವ ಹಾಗೂ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಜಗತ್ತಿನಲ್ಲಿ ಕುಡಿಯುವ ನೀರಿನ ಅರ್ಧದಷ್ಟು ಪ್ರಮಾಣದ ಮೂಲ ಅಂತರ್ಜಲ. ಅಂತರ್ಜಲದ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಅಂತರ್ಜಲ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಜಾಗೃತಿ ಮೂಡಿಸುವುದು ಅತ್ಯಗತ್ಯ ಹಾಗಾಗಿ ನೀರಿನ ಅಭಾವ, ಕಲುಷಿತಗೊಳಿಸುವಿಕೆ ಹೀಗೆ ಒಟ್ಟಾರೆಯಾಗಿ ಜನರಲ್ಲಿ ನೀರಿನ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ರೊಂಡ್ ಟೇಬಲ್ (ಬಿಆರ್‌ಟಿ೧೧೯) ಸಂಸ್ಥೆಯ ಅಧ್ಯಕ್ಷ ರವಿ ಜಾಧವ ಮತ್ತು ತಂಡದವರು, ಕೆಎಲ್‌ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕರಾದ ಶ್ರೀಮತಿ ಮನಿಷಾ ಪಿ. ಎಸ್., ಮಂಜುನಾಥ ಬಳ್ಳಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Gadi Kannadiga > Local News > ವಿಶ್ವ ಜಲ ದಿನದ ಕುರಿತು ಜಾಗೃತಿ ಜಾಥಾ
ವಿಶ್ವ ಜಲ ದಿನದ ಕುರಿತು ಜಾಗೃತಿ ಜಾಥಾ
Suresh24/03/2023
posted on
