ಅಥಣಿ : ಭಾರತ ದೇಶದ ಮೂಲ ವೈದ್ಯಕೀಯ ಪದ್ದತಿಯಾದ ಆಯುರ್ವೇದ ಪದ್ದತಿಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ, ಆಯುರ್ವೇದ ಚಿಕಿತ್ಸೆ ಭಾರತದ ಹೆಮ್ಮೆ ಎಂದು ತಾಲೂಕಾ ಆಯುರ್ವೇದ ವೈದ್ಯಾಧಿಕಾರಿ ಡಾ ಎಸ್ ಡಿ ಸಿಂಗೆ ಅವರು ಹೇಳಿದರು.
ಅವರು ತಾಲೂಕಾ ಆಯುರ್ವೇದ ಆಸ್ಪತ್ರೆಯಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ 07ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಮ್ಮ ಇಲಾಖೆಯಿಂದ ಸಪ್ಟೆಂಬರ್ 12 ರಿಂದ ಅಕ್ಟೋಬರ್ 23 ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅವುಗಳಲ್ಲಿ ಸಮಗ್ರ ಆರೋಗ್ಯಕ್ಕಾಗಿ ಆಯುರ್ವೇದ, ಸಹಸ್ರಮಾನಗಳಿಗೆ ಆಯುರ್ವೇದ, ಆಯುರ್ವೇದ ಆಹಾರ, ಹಿರಿಯ ನಾಗರಿಕರಿಗಾಗಿ ಆಯುರ್ವೇದ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಅನಂತರ ಡಾ ರವಿ ಮುದಗೌಡರ ಅವರು ಮಾತನಾಡಿ ಅಥಣಿ ತಾಲೂಕಿನಾಧ್ಯಂತ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ಕೋಹಳ್ಳಿ ಹಾಗೂ ಕೊಟ್ಟಲಗಿ ಗ್ರಾಮದಲ್ಲಿ ಆಯುರ್ವೇದ ಚಿಕಿತ್ಸೆ ಶಿಬಿರ ಹಮ್ಮಿಕೊಳ್ಳಲಾಗುತ್ತಿದ್ದು ಸಾರ್ವಜನಿಕರು ಇಂಗ್ಲೀಷ್ ಔಷಧ ಪದ್ದತಿ ಬಿಟ್ಟು ಆಯುರ್ವೇದದ ಕಡೆಗೆ ಹೆಚ್ಚು ಒತ್ತು ಕೊಡಬೇಕು ಎಂದರು.
ಈ ವೇಳೆ ಜವಾಹರಲಾಲ ರಾಠೋಡ, ಮಹಾಂತೇಶ ಕುಂಬಾರ, ಸುಜಾತಾ ಕೋಲಾರ, ಜಂಗ್ಲಿಸಾಬ ಕಾಜಿ, ಆನಂದ ಭಜಂತ್ರಿ, ಅಶೋಕ ರೋವಡಿಗಾರ, ಸುಮಿತ್ರಾ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.