This is the title of the web page
This is the title of the web page

Please assign a menu to the primary menu location under menu

Local News

ರಾಷ್ಟ್ರೀಯತೆ, ರಾಷ್ಟ್ರಪ್ರೇಮದ ಸಂಕೇತವೇ ಆಜಾದಿ ಕಾ ಅಮೃತ ಮಹೋತ್ಸವ


ಸವದತ್ತಿ :- “ಭಾರತವು ಬ್ರಿಟೀಷರಿಂದ ಮುಕ್ತವಾಗಿ ೭೫ ವಸಂತಗಳನ್ನು ಪೂರೈಸಿದ್ದು, ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಪಾಲ್ಗೋಳ್ಳುವ ಮೂಲಕ ಭಾರತೀಯರಾದ ನಾವೇಲ್ಲಾ ಹೆಮ್ಮೆ ಪಡಬೇಕು ಮತ್ತು ಪ್ರತಿಯೊಂದು ಕ್ಷಣವನ್ನು ಸಂಭ್ರಮಿಸಬೇಕು” ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಗರದ ಸ.ಕಿ.ಪ್ರಾ ಕನ್ನಡ ಶಾಲೆ ನಂ-೬ ರಲ್ಲಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮತ್ತು ರಾಷ್ಟ್ರಪ್ರೇಮದ ಭಾವನೆ ಬೆಳೆಸಲು ಮತ್ತು ಜಾಗೃತಗೊಳಿಸಲು ಆಜಾದಿ ಕಾ ಅಮೃತ ಮಹೋತ್ಸವ ಆಚರಿಸಿ ಭಾರತದ ಏಕತೆ ಮತ್ತು ಸಮಗ್ರತೆಯ ಅಂಶಗಳನ್ನು ತಿಳಿದುಕೊಂಡು ಎಲ್ಲರಿಗೂ ನಾವು ಮಾದರಿಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ರಾಷ್ಟ್ರ ಭಾವುಟದ ಚಿತ್ರಕಲಾ ಸ್ಫರ್ದೆ, ಸ್ವಾತಂತ್ರö್ಯ ಹೋರಾಟಗಾರರ ವೇಷಭೂಷಣ ಸ್ಫರ್ದೆ, ಗೀತಗಾಯನ ಸ್ಫರ್ದೆ, ಭಾಷಣ ಸ್ಫರ್ದೆ, ಏಕಪಾತ್ರಾಭಿನಯ ಸ್ಫರ್ದೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶಿಕ್ಷಕಿ ಎಮ್ ಆರ್ ಫಂಡಿ, ಅಂಗನವಾಡಿ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿಯವರು, ಪಾಲಕ-ಪೋಷಕರು ಮತ್ತು ಮಕ್ಕಳು ಇದ್ದರು.


Gadi Kannadiga

Leave a Reply