ಬಳ್ಳಾರಿ,ಏ.೧-ಈಗಾಗಲೇ ಘೋಷಣೆಯಾಗಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಟಿಕೆಟ್ ಘೋಷಣೆ ಆಗಿಲ್ಲ÷್ಲವೆಂದು ಸಾರಿಗೆ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಆಗಿರುವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿ ಕ್ಷೇತ್ರದಾದ್ಯಂತ ಬಿಜೆಪಿ ಪರ ಪ್ರಚಾರ ಕಾರ್ಯ ಆರಂಭಿಸಿದ್ದೇನೆ. ಪಕ್ಷದಿಂದ ನನಗೆ ಇನ್ನೂ ಹಸಿರು £ಶಾನೆ ತೋರಿಲ್ಲ. ಈ ಹಿಂದೆ ಗ್ರಾಮೀಣ ಕ್ಷೇತ್ರದಿಂದ ಸಣ್ಣ ಪಕ್ಕಿರಪ್ಪ ಸ್ಪರ್ಧಿಸಿ ಕೇವಲ ೧೬೦೦ ಮತಗಳ ಅಂತರದಿಂದ ಸೋತಿದ್ದರು. ನನ್ನ ಸೋದರ ಓಬಳೇಶ್ ಕೂಡ ಸ್ಪರ್ಧಿಸಿ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ನನ್ನ ಜನ್ಮಭೂಮಿ, ಕರ್ಮಭೂಮಿ, ಪುಣ್ಯಭೂಮಿ ಗ್ರಾಮೀಣ ಕ್ಷೇತ್ರವಾಗಿದೆ ಎಂದರು.
ಮುಂದಿನ ವಾರ ಪಟ್ಟಿ ಬಿಡುಗಡೆ ಸಾಧ್ಯತೆ:
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಪ್ರತಿ£ಧಿಗಳನ್ನು ಆಯ್ಕೆ ಮಾಡುವುದು ಒಂದು ಕಾನೂನಾತ್ಮಕ ಕ್ರಿಯೆ. ನಮ್ಮ ಪಕ್ಷದ ೩೦ ಜಿಲ್ಲೆಗಳ ಅಭ್ಯರ್ಥಿಗಳ ಪಟ್ಟಿಯನ್ನು ಆಯ್ಕೆ ಮಾಡಲು ರಾಜ್ಯ ಹಾಗೂ ಕೇಂದ್ರದ ನಾಯಕರು ಕ್ರಮ ಕೈಗೊಳ್ಳುತ್ತಾರೆ. ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ ಬಳಿಕ ಅಭ್ಯರ್ಥಿಗಳ ಪಟ್ಟಿ ಸಿದ್ಧಗೊಳ್ಳುತ್ತದೆ. ಮುಂದಿನ ವಾರ ಬಹುಶಃ ಪಟ್ಟಿ ಬಿಡುಗಡೆಯಾಗಬಹುದು. ಯಾರು? ಎಲ್ಲಿ £ಲ್ಲಬೇಕೆನ್ನುವುದು ಪಕ್ಷವೇ £ರ್ಣಯ ಕೈಗೊಳ್ಳುತ್ತದೆ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನುವ ವಿಶ್ವಾಸ ನನ್ನಲ್ಲಿದೆ. ಎಲ್ಲ ಸಮುದಾಯಗಳಿಗೆ ನಮ್ಮ ಸರ್ಕಾರ ಮೀಸಲಾತಿ £Ãಡಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯದಡಿ ಸ್ಥಾನ ಮಾನ £Ãಡಲಾಗಿದೆ. ಬಿಜೆಪಿಯಿಂದ ಈಗಾಗಲೇ ರಾಜ್ಯದಾದ್ಯಂತ ಸಂಕಲ್ಪ ಯಾತ್ರೆ, ವಿಜಯ ಯಾತ್ರೆ ಮತ್ತು ಸಂಗಮ ಯಾತ್ರೆಗಳನ್ನು ಮಾಡಲಾಗಿದೆ. ದಾವಣಗೆರೆಯಲ್ಲಿ ಅಭೂತಪೂರ್ವ ಯಶಸ್ಸು ಸಿಕ್ಕಿದೆ. ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಕ್ಷಕ್ಕೆ ವರ್ಚಸ್ಸು, ಹುಮ್ಮಸ್ಸು ತಂದುಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಬಸ್ ಪಂಚೇರ್ ಆಗಿದೆ:
ಆಡಳಿತಾರೂಢ ಬಿಜೆಪಿಯಿಂದ ಅಧಿಕಾರ ಕಿತ್ತುಕೊಳ್ಳಬೇಕೆಂದು ಹೊರಟಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಸು ಭಗ್ನವಾಗುವುದು ಖಚಿತ. ಅವರು ಏನೇ ಹರಸಾಹಸ ಮಾಡಿದರೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಅವರೇ ಆರಂಭಿಸಿದ್ದ ಪ್ರಜಾ ಧ್ವ£ ಬಸ್ ನ ಹಾರ್ನ್ ಕ್ಷೀಣಿಸಿ, ಅಡಗಿ ಹೋಗಿದೆ. ಕಾಂಗ್ರೆಸ್ ನವರ ಪ್ರಜಾ ಧ್ವ£ ಬಸ್ ಪಂಚೇರ್ ಆಗಿ ಎಲ್ಲೋ ಒಂದು ಕಡೆ £ಂತು ಹೋಗಿದೆ ಎಂದು ಲೇವಡಿ ಮಾಡಿದ ಅವರು, Àಅವಳಿ ಜಿಲ್ಲೆಗಳಾದ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಜನರಿಗೆ ಬಿಜೆಪಿ ಪರವಾಗಿ ಒಲವಿದೆ. ಯಾವುದೇ ಆತಂಕವಿಲ್ಲದೇ ಚುನಾವಣೆ ಎದುರಿಸುತ್ತೇವೆ ಎಂದರು.
ಎನ್‌ವೈಜಿ ಪಕ್ಷ ಬಿಟ್ಟಿದ್ದಕ್ಕೆ ಬೇಸರವಿದೆ:
ಕೂಡ್ಲಿಗಿ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಬೇಸರ ತಂದಿದೆ. ಅವರು ಹಿರಿಯರು. ಅವರಿಗೆ ಬಿಜೆಪಿ ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿತ್ತು. ಕ್ಷೇತ್ರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಸಹ ರೂಪಿಸಿತ್ತು. ಅವರು ಹಿರಿಯ ರಾಜಕಾರಣಿ. ನಮ್ಮ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೂ ಕೂಡ್ಲಿಗಿಯ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಕಾರ್ಯಕರ್ತರು ಸದೃಢರಾಗಿದ್ದಾರೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಲಿದ್ದಾರೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.
Gadi Kannadiga > State > ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ: ಬಿ.ಶ್ರೀರಾಮುಲು
ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ನನಗೆ ಇನ್ನೂ ಟಿಕೆಟ್ ಘೋಷಣೆ ಆಗಿಲ್ಲ: ಬಿ.ಶ್ರೀರಾಮುಲು
Suresh01/04/2023
posted on

More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023