This is the title of the web page
This is the title of the web page

Please assign a menu to the primary menu location under menu

Local News

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಅಹ್ವಾನ


ಬೆಳಗಾವಿ,ಅ.೨೧: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ (sಸ್ನಾತಕೋತ್ತರ ಹಾಗೂ ವೃತ್ತಿಪರ ಕೋರ್ಸಿನ ವಿದ್ಯಾರ್ಥಿಗಳು) ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಬಯಸುವ ಪ್ರವರ್ಗ-೧, ೨ಎ, ೨ಬಿ, ೩ಎ, ೩ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ನವಂಬರ್ ೧೬ ರ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಪ್ರವರ್ಗ-೧, ಎಸ್.ಸಿ ಮತ್ತು ಎಸ್.ಟಿ ರೂ.೨.೫೦ ಲಕ್ಷ ಹಾಗೂ ಪ್ರವರ್ಗ-೨ಎ, ೨ಬಿ, ೩ಎ, ೩ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ರೂ.೧.೦೦ ಲಕ್ಷ ವಿದ್ಯಾರ್ಥಿಯ ಪೋಷಕರ ಆದಾಯ ಮಿತಿ ಹೊಂದಿರಬೇಕು.
ಇಲಾಖೆಯ ವೆಬ್‌ಸೈಟ್ hಣಣಠಿs://shಠಿ.ಞಚಿಡಿಟಿಚಿಣಚಿಞಚಿ.gov.iಟಿ ನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬೇಕು.
ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‌ಸೈಟ್ ತಿತಿತಿ.bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ನ್ನು ನೋಡಬಹುದು.
ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ bಛಿತಿಜ.hosಣeಟ[email protected]ಞಚಿಡಿಟಿಚಿಣಚಿಞಚಿ.gov.iಟಿ ಗೆ ಇ-ಮೇಲ್ ಮುಖಾಂತರ ಸಂಪರ್ಕಿಸುವುದು.
ಹೊಸ ವಿದ್ಯಾರ್ಥಿಗಳು ನವಂಬರ್ ೧೦ ಒಳಗಾಗಿ ಅರ್ಜಿ ಸಲ್ಲಸಬೇಕು. ನವಂಬರ್ ೧೬ ರ ಒಳಗಾಗಿ ತಾಲ್ಲೂಕು ಕಲ್ಯಾಣ ಅಧಿಕಾರಿಗಳು ಪರಿಶೀಲನೆ ಮಾಡುವರು. ನವಂಬರ್ ೨೧ ರಂದು ಕೌನ್ಸಲಿಂಗ್ ಮೂಲಕ ಆಯ್ಕೆಯಾದ ಹೊಸ ವಿದ್ಯಾರ್ಥಿಗಳ ಆಯ್ಕೆ ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವಿದ್ಯಾರ್ಥಿನಿಲಯಗಳಿಗೆ ನವಂಬರ್ ೨೮ ರ ಒಳಗಾಗಿ ಪ್ರವೇಶ ಪಡೆಯಬಹುದು ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply