This is the title of the web page
This is the title of the web page

Please assign a menu to the primary menu location under menu

Local News

ಉದಯಪುರ ಘಟನೆ ಖಂಡಿಸಿ ಬಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಪ್ರತಿಭಟನೆ


ಬೆಳಗಾವಿ: ನಗರದ ಚೆನ್ನಮ್ಮ ವೃತ್ತದಲ್ಲಿ ಇಂದು ಬಜರಂಗ ದಳ, ವಿಶ್ವ ಹಿಂದೂ ಪರಿಷತ್, ಹಾಗೂ ಬಿಜೆಪಿಯ ಅನೇಕ ನಾಯಕರು ಜಂಟಿಯಾಗಿ ಬ್ರಹತ್ ಪ್ರತಿಭಟನೆ ನಡೆಸಿದರು.

ರಾಜಸ್ತಾನದ ಉದಯಪುರದಲ್ಲಿ ಕಣಯ್ಯಲಾಲ್ ಎಂಬ ಟೇಲರನ್ನ ಹಾಡುಹಗಲೇ ಕೊಚ್ಚಿ ಕೊಲೆ ಮಾಡಿದ್ದರ ಪರಿಣಾಮವಾಗಿ ನಗರದ ಎಲ್ಲಾ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಪಕ್ಷ ಈ ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು..

ನೂರಾರು ಕಾರ್ಯಕರ್ತರೊಂದಿಗೆ ಆಗಮಿಸಿದ ಮುಖಂಡರು ಘೋಷಣೆ ಕೂಗುತ್ತಾ, ಚೆನ್ನಮ್ಮ ವೃತ್ತದ ಸುತ್ತ ಮಾನವ ಸರಪಳಿ ನಿರ್ಮಿಸಿ, ಸುಮಾರು ಒಂದು ಗಂಟೆಗಳ ಕಾಲ ಮುಖಂಡರು ಮಾತನಾಡಿ ತಮಗಾದ ಅನ್ಯಾಯದ ವಿರುದ್ಧ ವಾಗ್ಧಾಳಿ ನಡೆಸಿದರು.

ಬಜರಂಗ ದಳದ ಬೆಳಗಾವಿ ಮಹಾನಗರ ಅಧ್ಯಕ್ಷ ಬಸವರಾಜ್ ಬಾಗೋಜಿ ಮಾತನಾಡಿ, ನೀವು ಕತ್ತಿ ಹಿಡಿದು ನಮ್ಮ ಮುಂದೆ ನಿಂತಾಗಲೆಲ್ಲ ನಾವು ಎದೆ ಕೊಟ್ಟು ಹೋರಾಡಿ ನಿಮ್ಮನ್ನ ಮೆಟ್ಟಿ ನಿಲ್ಲುತ್ತೇವೆ ಎಂದರು.

ಈ ಮುಸಲ್ಮಾನ್ ಮತಾಂಧ ಪ್ರಧಾನಿಯವರಿಗೆ ಜೀವಬೆದರಿಕೆ ಹಾಕ್ತಾನೆ, ದೇಶ ವಿದೇಶಗಳಲ್ಲೂ ಹೆಸರಾದ ಪ್ರಧಾನಿಯವರಿಗೆ ಈತ ಬೆದರಿಕೆ ಹಾಕ್ತಾನೆ ಅಂದ್ರೆ ಇವಾ ಎಂತಾ ರಾಕ್ಷಸಿ ಮನಸಿನವ ಇರಬೇಕು, ಈತನಿಗೆ ಪಾಕಿಸ್ತಾನದ ಯಾವದೋ ಒಂದು ಬಯೋತ್ಪಾದಕ ಸಂಘಟನೆಯ ಬೆಂಬಲವಿದೆ ಅನಿಸುತ್ತೆ ಎಂದು ಕಿಡಿಕಾರಿದರು.

ಮನೆಮನೆಯಿಂದಲೂ ಹಿಂದೂಗಳು ಬೀದಿಗಿಳಿದು ಹೋರಾಟ ಮಾಡಬೇಕು ರಾಜ್ಯ ದೇಶ ಎಲ್ಲಕಡೆ ಹುಡುಕೋಣ, ಆ ಮತಾಂದನನ್ನ ಎಲ್ಲಿವರೆಗೆ ಬಚ್ಚಿಡುತ್ತಾರೋ ನೋಡೋಣ, ಒಬ್ಬ ಮುಸ್ಲಿಂ ಹೇಳ್ತಾನೆ, 15 ನಿಮಿಷ ಕೊಟ್ರೆ ಇಡೀ ಹಿಂದುಗಳನ್ನೆ ನಾಶ ಮಾಡ್ತೀನಿ ಅಂತಾ, ಯಾಕೆ ನೆನಪಿಲ್ಲವೇ ಗುಜರಾತ್ ಘಟನೆ, ನಮಗೆ 15 ನಿಮಿಷ ಕೊಟ್ಟರೆ, ನಿಮ್ಮ ಪರಿಸ್ಥಿತಿ ಏನಾಗುತ್ತೆ ನೋಡ್ಕೊಳ್ಳಿ,, ನಮ್ಮನ್ನ ಕೆನಕಬೇಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹಿಂದೂಗಳು ಯಾವಾಗಲೂ ಗಟ್ಟಿ ಎದೆಯಿಂದ ಹೋರಾಟ ಮಾಡ್ತೀವಿ, ಇದು ನಿಮಗೆ ಎಚ್ಚರಿಗೆ ಗಂಟೆ, ಮುಂದೆ ಏನಾದರೂ ಇದೆ ರೀತಿ ಆದರೆ ಅಲ್ಲಿಯ ಕಾಂಗ್ರೆಸ್ ಸರ್ಕಾರವೇ ಕಾರಣ ಆಗುತ್ತದೆ, ನೀವು ಸುಮ್ಮನಿದ್ದರೆ ಈ ರಾಕ್ಷಸ ಜಿಹಾದಿ ಬುದ್ದಿ ನಿಮ್ಮನ್ನು ಕೂಡಾ ಸುಡುತ್ತೆ, ಆಗ ನೀವೇ ಮತ್ತೆ ಬಜರಂಗ ದಳ ಹಿಂದೂ ಪರಿಷತ್ ಕಡೆ ರಕ್ಷಣೆಗೆ ಬರಬೇಕಾಗುತ್ತದೆ ಎಂದರು.

ಈ ಮತಾಂಧರಿಗೆ ಶಿಕ್ಷೆ ಆಗೋವರೆಗೂ ನಮ್ಮ ಹೋರಾಟ ಉಗ್ರವಾಗಿ ಮುಂದುವರೆಯುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರು, ಬಜರಂಗ ದಳದ ಮುಖಂಡರು, ಸಂಸದೆ ಮಂಗಳಾ ಅಂಗಡಿ, ಮಾಜಿ ಶಾಸಕ ಸಂಜಯ ಪಾಟೀಲ, ವಿವಿಧ ಹಿಂದೂಪರ ಸಂಘಟನೆಗಳು, ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.


Gadi Kannadiga

Leave a Reply