This is the title of the web page
This is the title of the web page

Please assign a menu to the primary menu location under menu

Local News

ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವೆ : ಬಾಲಚಂದ್ರ ಜಾರಕಿಹೊಳಿ


ಮೂಡಲಗಿ: ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.
ತಾಲೂಕಿನ ಕುಲಗೋಡ ಗ್ರಾಮದ ಪ್ರಸಿದ್ಧ ಬಲಭೀಮ ದೇವಸ್ಥಾನದ ದರ್ಶನ ಪಡೆದು ಮಾತನಾಡಿದ ಅವರು, ಎಲ್ಲ ಧರ್ಮ ಮತ್ತು ಜಾತಿಗಳನ್ನು ಒಗ್ಗೂಡಿಸಿ ಪರಸ್ಪರ ಸಹೋದರತ್ವವನ್ನು ಸಾರುತ್ತಿರುವ ಜಾತ್ಯಾತೀತ ದೇಶವಾಗಿದೆ ಎಂದು ಹೇಳಿದರು. ಕುಲಗೋಡ ಗ್ರಾಮದ ಅಭಿವೃದ್ಧಿಗಾಗಿ ಸರ್ಕಾರದ ಹಲವಾರು ಪ್ರಗತಿಪರ ಯೋಜನೆಗಳನ್ನು ಅನುಷ್ಠಾನ ಮಾಡಲಾಗಿದೆ. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರಾರಂಭವಾಗಲಿದೆ. ಮದುವೆ, ಮುಂಜೆ ಹಾಗೂ ಇನ್ನೀತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಗ್ರಾಮದ ವಡ್ಡರ ಮತ್ತು ಭಜಂತ್ರಿ ಸಮುದಾಯಗಳ ಸಭಾ ಭವನಗಳನ್ನು ನಿರ್ಮಿಸಲಾಗಿದ್ದು, ಸಮಾಜ ಬಾಂಧವರು ಉತ್ತಮ ಕಾರ್ಯಗಳಿಗಾಗಿ ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಬಲಭೀಮ ದೇವಸ್ಥಾನದ ಅರ್ಚಕ ಎಚ್.ಆರ್.ಪೂಜೇರಿ ಸತ್ಕರಿಸಿದರು.ಸಮುದಾಯ ಭವನಗಳನ್ನು ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ ಅವರನ್ನು ಭಜಂತ್ರಿ ಮತ್ತು ವಡ್ಡರ ಸಮಾಜಗಳಿಂದ ಸತ್ಕರಿಸಲಾಯಿತು.ಇದೇ ಸಂದರ್ಭದಲ್ಲಿ ತಲಾ ೨೦ ಲಕ್ಷ ರೂ. ವೆಚ್ಚದ ಎರಡೂ ಸಮುದಾಯಗಳ ಸಭಾ ಭವನಗಳನ್ನು ಉದ್ಘಾಟಿಸಿದರು. ಕುಲಗೋಡ ಗ್ರಾಮದ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಮಾಜಿ ನಿರ್ದೇಶಕ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಸತೀಶ ವಂಟಗೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಮಾಜಿ ಉಪಾಧ್ಯಕ್ಷ ಎಂ.ಎಂ. ಪಾಟೀಲ, ಪುಟ್ಟಣ್ಣ ಪೂಜೇರಿ, ನ್ಯಾಯವಾದಿ ಪ್ರಶಾಂತ ವಂಟಗೋಡಿ, ಸುನೀಲ ವಂಟಗೋಡಿ, ಭೀಮಶಿ ಬಂಡಿವಡ್ಡರ, ಅಲ್ಲಪ್ಪ ಪರುಶೆಟ್ಟಿ, ಶ್ರೀಮಂತ ಪಾಟೀಲ, ಹೊನ್ನಪ್ಪ ಪಾತ್ರೂಟ, ನಾಗಪ್ಪ ಬಂಡಿವಡ್ಡರ, ಯಲ್ಲಪ್ಪ ಬಂಡಿವಡ್ಡರ, ವಿಠ್ಠಲ ಭಜಂತ್ರಿ, ಹನಮಂತ ಲಕ್ಕಾರ, ಶ್ರೀಕಾಂತ ಭಜಂತ್ರಿ, ಬಸು ಬಿಲಕುಂದಿ, ಗ್ರಾಪಂ ಉಪಾಧ್ಯಕ್ಷ ಬಸವರಾಜ ಯರಗಟ್ಟಿ, ಆನಂದ ಸಸಾಲಟ್ಟಿ, ಸದಾಶಿವ ಗುಡಗುಡಿ, ವಿಜಯ ಜಡ್ಲಿ, ಮುಂತಾದವರು ಉಪಸ್ಥಿತರಿದ್ದರು.


Gadi Kannadiga

Leave a Reply