ಬೆಳಗಾವಿ, ಮಾ.೧೦ : ನಗರದ ಶಹಾಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ.೧೨ ೨೦೨೩ ರಂದು ಸಾರ್ವಜನಿಕರು ರಂಗ ಪಂಚಮಿ ಆಚರಿಸಲಿದು,್ದ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಮಾ.೧೨ ರಂದು ಬೆಳಿಗ್ಗೆ ೦೬ ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಮದ್ಯ ಅಂಗಡಿಗಳು, ಬಾರ್/ರೆಸ್ಟೋರೆಂಟ್‌ಗಳು, ವೈನ್‌ಶಾಪ್, ಕೆಎಸ್‌ಬಿಸಿಎಲ್ ಡಿಪೋಗಳು, ಕ್ಲಬ್‌ಗಳು ಹಾಗೂ ದಾಸ್ತಾನು ಡಿಪೋಗಳಿಂದ ಮದ್ಯ ಸರಬರಾಜು ಹಾಗೂ ಮಾರಾಟವನ್ನು ಬಂದ್ ಮಾಡಬೇಕು ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಆಯುಕ್ತರಾದ ಡಾ. ಎಂ. ಬಿ ಬೋರಲಿಂಗಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ರಂಗ ಪಂಚಮಿ ನಿಮಿತ್ತ ಮದ್ಯ ಮಾರಾಟ ನಿಷೇಧ
ರಂಗ ಪಂಚಮಿ ನಿಮಿತ್ತ ಮದ್ಯ ಮಾರಾಟ ನಿಷೇಧ
Suresh10/03/2023
posted on
More important news
ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ
24/05/2023