This is the title of the web page
This is the title of the web page

Please assign a menu to the primary menu location under menu

State

ಕಡೋಲಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೆಂಗಳೂರು ತಂಡ ಭೇಟಿ 


ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರ್ಕಾರದಿಂದ ಉನ್ನತ ದರ್ಜೆಗೇರಿಸಿದ ಮಾದರಿ ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರಕ್ಕೆ ಬೆಂಗಳೂರಿನ ಟಿಬಿ ಸೆಂಟರ್ ನ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆ ಸಂಬಂಧಿತ ಜಂಟಿ ನಿರ್ದೇಶಕರಾದ ಡಾ. ಸುರೇಶ ಶಾಸ್ತ್ರಿ ಮತ್ತು ತಂಡ ಭೇಟಿ ನೀಡಿ ಕ್ಷೇಮ ಕೇಂದ್ರದ ಕಟ್ಟಡ, ಕಟ್ಟಡದ ಒಳಗಿನ ವಿವಿಧ ವಿಭಾಗಗಳು, ಅಲ್ಲಿನ ಸ್ವಚ್ಛತೆ , ಹೊರ ರೋಗಿಗಳ ಮತ್ತು ಒಳರೋಗಿಗಳ ವಿಭಾಗ, ಎಲ್ಲಾ ವಿಭಾಗಗಳ ರೋಗಿಗಳಿಗೆ ತತ್ತಕ್ಷಣ ಕೈಗೊಳ್ಳಬಹುದಾದ ಕ್ರಮಗಳು, ಅಲ್ಲಿಯ ಸಿಬ್ಬಂದಿಯ ಕಾರ್ಯಕ್ಷಮತೆ,ರೋಗಿಗಳಿಗೆ ಮಿನಿ ಲೈಬ್ರರಿ,ವಿಶೇಷವಾಗಿ ಇಲ್ಲಿನ ಸ್ವಚ್ಛತೆ, ಮತ್ತು ಆಸ್ಪತ್ರೆಯ ಹೊರಾಂಗಣದಲ್ಲಿ ಮಾಡಲಾಗಿರುವ ಆಕರ್ಷಕ ಉದ್ಯಾನವನ, ಮಳೆ ನೀರು ಕೊಯ್ಲು ಶೇಖರಣಾ ಘಟಕ, ನೀರು ಸಂಸ್ಕರಣಾ ವಿಭಾಗ ವಿವಿಧ ಸಿಬ್ಬಂದಿಗಳಿಗೆ ಕಟ್ಟಲಾಗಿರುವ ಸಿಬ್ಬಂದಿ ಕಟ್ಟಡಗಳನ್ನು ವೀಕ್ಷಿಸಿ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಖಾಸಗಿ ಆಸ್ಪತ್ರೆಯನ್ನು ಮೀರಿಸುವಂತಹ ಇಲ್ಲಿನ ವಾತಾವರಣ ಇಲ್ಲಿನ ಸ್ವಚ್ಛತೆ ನಿಜಕ್ಕೂ ಗಮನಾರ್ಹವಾದದ್ದು.ಇದಕ್ಕೆ ಇಲ್ಲಿನ ವೈದ್ಯಾಧಿಕಾರಿಗಳಾದ ಡಾ. ವಿನಯ ಹಳ್ಳಿಕೇರಿಯವರ ವಿಶೇಷ ಪ್ರಯತ್ನ ಮತ್ತು ಎಲ್ಲರ ಸಹಕಾರದಿಂದ ಆಗಿದೆ. ಇದನ್ನೇ ಮುಂದುವರಿಸಿಕೊಂಡು ಹೋಗಿ ಎಂದರು.ರೋಗಿಗಳ ಮನೋಲ್ಲಾಸಕ್ಕೆ ಡಿಜಿಟಲ್ ತಂತ್ರಜ್ಞಾನದ ಎಲ್ಈ ಡಿ ಸೇರಿದಂತೆ ವಿವಿಧ ಉಪಕರಣಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವಿನಯ ಹಳ್ಳಿಕೇರಿ, ಆಯುಷ್ಮಾನ್ ಭಾರತ ವಿಭಾಗದ ಡಾ. ಢಾoಗೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಡಾ. ಅನಿಲ ಕೊರಬು ಸೇರಿದಂತೆ ಆಸ್ಪತ್ರೆಯ ಸರ್ವ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.


Gadi Kannadiga

Leave a Reply